ಮತ್ಸ್ಯಗಂಧ ರೈಲಲ್ಲಿ ಕಳವು
ಕನ್ನಡಪ್ರಭ ವಾರ್ತೆ ಮಂಗಳೂರು ಮಾ. 8
ಮುಂಬೈಯಿಂದ ಮಂಗಳೂರಿಗೆ ಆಗಮಿಸುತ್ತಿದ್ದ ಮತ್ಸ್ಯಗಂಧ ರೈಲಲ್ಲಿ ದಂಪತಿ ಬಳಿ ಬ್ಯಾಗ್‌ನಲ್ಲಿದ್ದ ಚಿನ್ನಾಭರಣ, ನಗದು ಸಹಿತ 8 ಲಕ್ಷ ಮೌಲ್ಯದ ಸ್ವತ್ತು ಹೊನ್ನಾವರ ಬಳಿ ಕಳವಾಗಿದೆ. ಮುಂಬೈ ಾಣೆ ನಿವಾಸಿ ಗೋಪಾಲ ನಾರಾಯಣ ನಾಯ್ಕ್ ಮತ್ತು ಪ್ರೇಮಾ ದಂಪತಿ ಮಂಗಳೂರಿನ ಸಂಬಂಧಿಕರ ಮನೆಗೆ ಆಗಮಿಸುತ್ತಿದ್ದರು. ಶುಕ್ರವಾರ ಹೊನ್ನಾವರ ನಿಲ್ದಾಣದಲ್ಲಿ ರೈಲು ಚಲಿಸುತ್ತಿರುವ ವೇಳೆ ಅಪರಿಚಿತನೊಬ್ಬ ಇವರ ಬಳಿ ಇದ್ದ ಚಿನ್ನಾಭರಣ ತುಂಬಿದ ವ್ಯಾನಿಟಿ ಬ್ಯಾಗನ್ನು ಕಳವು ಮಾಡಿದ್ದಾನೆ.