ಲವ್ ಜಿಹಾದ್ ವಿರುದ್ಧ ಬಜರಂಗದಳ
ಕ.ಪ್ರ.ವಾರ್ತೆ ಮಂಗಳೂರು ಮಾ.8
ಮುಸ್ಲಿಂ ಯುವಕರು ಹಿಂದೂ ಹುಡುಗಿಯರನ್ನು ಪ್ರೀತಿಸಿ ಮತಾಂತರಿಸುವ ಲವ್ ಜಿಹಾದ್ಗೆ ಪುತ್ತೂರು ಪಾಲ್ತಾಡಿ ಪ್ರಕರಣ ಜ್ವಲಂತ ಉದಾಹರಣೆ. ಇದೇ ರೀತಿಯ ಪ್ರಕರಣಗಳು ಮುಂದುವರಿದರೆ ಮುಸ್ಲಿಂ ಸಮುದಾಯದ ಜತೆ ಆರ್ಥಿಕ ವ್ಯವಹಾರ ಕಡಿದುಕೊಳ್ಳುವ ಬಗ್ಗೆ ಜನಜಾಗೃತಿ ಮೂಡಿಸುತ್ತೇವೆ ಎಂದು ಬಜರಂಗದಳ ರಾಜ್ಯ ಸಂಚಾಲಕ ಸೂರ್ಯನಾರಾಯಣ್ ಎಚ್ಚರಿಸಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪುತ್ತೂರಿನ ಹಿಂದೂ ಯುವತಿಯನ್ನು ಪ್ರೀತಿಸಿ ಕೇರಳ ಪೊನ್ನಾಣಿಯಲ್ಲಿ ಮತಾಂತರ ಮಾಡಿದ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡ, ನ್ಯಾಯವಾದಿ ಜೈಲು ಸೇರಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ಮುಖಂಡರು ತುಟಿಪಿಟಿಕ್ ಎನ್ನುತ್ತಿಲ್ಲ. ಹಾಗಾದರೆ ಲವ್ ಜಿಹಾದ್ಗೆ ಕಾಂಗ್ರೆಸ್ ಮುಖಂಡರ ಸಮ್ಮತಿ ಇದೆಯೇ ಎಂದು ಪ್ರಶ್ನಿಸಿದರು. ಪ್ರೀತಿ, ಪ್ರೇಮದ ಬಲೆಯಲ್ಲಿ ಕೆಡವಿ ಮತಾಂತರ ಮಾಡಿ ಕೊನೆಗೆ ಯುವತಿಯರನ್ನು ಮಾರಿದ ಅನೇಕ ಪ್ರಕರಣಗಳಿವೆ. ಯುವತಿಯರ ನಾಪತ್ತೆ ಪ್ರಕರಣಗಳನ್ನು ಸಿಐಡಿ ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.
ಮೊಬೈಲ್ ರಿಚಾರ್ಜ್ ಸೆಂಟರ್ನಲ್ಲಿ ಕೆಲಸ ಮಾಡುವ ಯುವಕರು ಇದರಲ್ಲಿ ಶಾಮೀಲಾಗಿದ್ದಾರೆ. ಅವರು ಲವ್ ಜಿಹಾದ್ ವಿರೋಧಿಸಿದ ಯುವಕನ್ನು ಕೊಲೆ ಮಾಡಿದ್ದಾರೆ ಎಂದರು.