ಆಲ್ಕೋಹಾಲಿಗಾಗಿ ಹಾಲು ಕದ್ದರು!
ಉಪ್ಪಿನಂಗಡಿ: ಕುಡಿಯಲು ಹಣ ಕಡಿಮೆ ಬಿದ್ದಿದ್ದಕ್ಕೆ ನಂದಿನಿ ಹಾಲು ಕದ್ದು ಮಾರಾಟ ಮಾಡಲು ಹೋದಾಗ ಸಿಕ್ಕಿ ಬಿದ್ದ ಘಟನೆ ಉಪ್ಪಿನಂಗಡಿಯಲ್ಲಿ ಭಾನುವಾರ ನಡೆದಿದೆ. ಕೋಡಿಂಬಾಡಿಯ ಕರಿಯ, ಹಾಸನದ ಈಶ್ವರ ಮದ್ಯವೆಸನಿಗಳು. ಕುಡಿಯಲು ದುಡ್ಡಿನ ಕೊರತೆ ಬಿದ್ದಿದ್ದಕ್ಕೆ ಭಾನುವಾರ ಬೆಳಗ್ಗೆ ಇಲ್ಲಿನ ಹಳೆ ಬಸ್ ನಿಲ್ದಾಣದ ನಂದಿನಿ ಹಾಲಿನ ಬೂತ್ ಬಳಿ ಇರಿಸಲಾಗಿದ್ದ ಟ್ರೇಯಿಂದ ಹತ್ತು ಲೀ. ಹಾಲು ಕದ್ದು ಆ ಹಾಲನ್ನು ನಗದೀಕರಿಸಲು ಹೊಸ ಬಸ್ ನಿಲ್ದಾಣದಲ್ಲಿರುವ ಹೊಟೇಲೊಂದಕ್ಕೆ ತೆರಳಿದ್ದಾರೆ. ಅನುಮಾನಗೊಂಡ ಹೊಟೇಲ್ನವರು ಪೊಲೀಸರಿಗೆ ಮಾಹಿತಿ ನೀಡಿದ್ದು ವಿಚಾರಣೆ ವೇಳೆ ಸತ್ಯ ಹೊರ ಬಿದ್ದಿದೆ.