ಇಂದಿನಿಂದ ಕಡಪಿಕರಿಯ ಶ್ರೀಯಾನ್ ಮೂಲಸ್ಥಾನದ ಪುನರ್ ಪ್ರತಿಷ್ಠೆ
ಮಂಗಳೂರು: ಕೂಳೂರು ಕಡಪಿಕರಿಯ ಶ್ರೀಯಾನ್ ಮೂಲಸ್ಥಾನದ ಅಣ್ಣಪ್ಪ ಪಂಜುರ್ಲಿ, ಕಲ್ಕುಡ, ಗುಳಿಗ ದೈವಗಳ ಪುನರ್ ಪ್ರತಿಷ್ಠಾ, ನೇಮೋತ್ಸವ ಮಾ. 12 ರಿಂದ 14ರ ವರಗೆ ನಡೆಯಲಿದೆ.
ಸುಮಾರು ರು. 32 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ದೈವಸ್ಥಾನದ ಕುಂಭಾಭಿಷೇಕವು ಕೊಲೆಕಾಡಿ ವಾದಿರಾಜ ಉಪಾಧ್ಯಾಯ, ಧಾರ್ಮಿಕ ವಿಧಿವಿಧಾನಗಳನ್ನು ಚೇಳ್ಯಾರು ಸುಬ್ರಹ್ಮಣ್ಯ ಭಟ್ ನಡೆಸುವರು ಎಂದು ಸಮಿತಿ ಅಧ್ಯಕ್ಷ ಸುಭೋದ್ ದಾಸ್ ಶ್ರೀಯಾನ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
14 ರಂದು ನಡೆಯುವ ಸಭಾಕಾರ್ಯಕ್ರಮದಲ್ಲಿ ಉದ್ಯಮಿ ಸತೀಶ್ ಬೈಕಂಪಾಡಿ ಅಧ್ಯಕ್ಷತೆ ವಹಿಸುವರು. ವಾರ್ಷಿಕ ತನು ತಂಬಿಲೋತ್ಸವ, ದೈವಗಳ ಕೋಲ ಬಲಿಸೇವೆ ನಡೆಯಲಿದೆ ಎಂದರು.