ಉಪ್ಪಿನಂಗಡಿ; ಧಾರಾಕಾರ ಮಳೆ, ಸಿಡಿಲು ಬಡಿದು ಮನೆಗೆ ಹಾನಿ
ಮಂಗಳೂರು: ಕಳೆದ ಮೂರು ನಾಲ್ಕು ದಿನಗಳಂತೆ ಸಂಜೆ ವೇಳೆ ಮಳೆಯಾಗುವ ಪ್ರವೃತ್ತಿ ಸೋಮವಾರವೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂದುವರಿದಿದೆ.
ಪುತ್ತೂರು ತಾಲೂಕಿನ ಉಪ್ಪಿನಂಗಡಿ ಪರಿಸರದಲ್ಲಿ ಗುಡುಗು ಸಿಡಿಲು ಸಹಿತ ಸಂಜೆ ಸುಮಾರು ಒಂದು ಗಂಟೆ ಕಾಲ ಧಾರಾಕಾರ ಮಳೆಯಾಗಿದೆ. ಮಳೆ ಸಂದರ್ಭ ಅಲಂಕಾರು ಗ್ರಾಮದ ಕೆದಿಲ ನಿವಾಸಿ ಜೇಕಬ್ ಎಂಬವರ ಮನೆಗೆ ಸಿಡಿಲು ಬಡಿದು ಸ್ವಲ್ಪ ಹಾನಿ ಸಂಭವಿಸಿದೆ.
ಉಪ್ಪಿನಂಗಡಿ ಪರಿಸರದ ನೆಲ್ಯಾಡಿ, ಕಡಬ ಭಾಗದಲ್ಲೂ ರಾತ್ರಿ ವ್ಯಾಪಕ ಮಳೆಯಾಗಿದೆ. ಪುತ್ತೂರು ಪೇಟೆಯಲ್ಲಿ ರಾತ್ರಿ 8 ಗಂಟೆ ವೇಳೆಗೆ ಸುಮಾರು 15 ನಿಮಿಷ ಕಾಲ ಸಾಧಾರಣ ಮಳೆಯಾಗಿದೆ.