ಉಳ್ಳಾಲ ಪುರಸಭೆಯಲ್ಲಿ 'ಕೈ' ಚಳಕ
ಮಂಗಳೂರು: ಉಳ್ಳಾಲ ಪುರಸಭೆಯಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಲಗ್ಗೆ ಹಾಕಿದೆ. 27 ವಾರ್ಡ್ ಪೈಕಿ ಕಾಂಗ್ರೆಸ್ 17, ಬಿಜೆಪಿ 7, ಎಸ್ಡಿಪಿಐ 1, ಇಬ್ಬರು ಪಕ್ಷೇತರರು ಗೆಲುವು ಪಡೆದಿದ್ದಾರೆ.
ಕಳೆದ ಬಾರಿ ಕೂಡ 17 ಸ್ಥಾನ ಕಾಂಗ್ರೆಸ್ ಪಡೆದಿದ್ದರೆ, ಬಿಜೆಪಿ 6, ಸಿಪಿಐಎಂ 2, ಜೆಡಿಎಸ್ 1, ಪಕ್ಷೇತರ 1 ಸ್ಥಾನ ದಕ್ಕಿತ್ತು. ಕಾಂಗ್ರೆಸ್ ಹಿಂದಿನ ಚುನಾವಣೆಯಲ್ಲಿ ಪಡೆದಷ್ಟೇ ಸ್ಥಾನ ಗಳಿಸಿದ್ದರೂ ವಾರ್ಡ್ ಮಾತ್ರ ಬೇರೆಯಾಗಿದೆ. ಬಿಜೆಪಿಗೆ 1 ಸ್ಥಾನ ಕಡಿಮೆಯಾದರೆ, ಎಸ್ಡಿಪಿಐ ಪ್ರಥಮ ಪ್ರವೇಶ ಮಾಡಿದೆ. ಈ ಬಾರಿ ಸಿಪಿಐಎಂ ಮತ್ತು ಜೆಡಿಎಸ್ ಶೂನ್ಯ ಸಂಪಾದನೆ.
ಉಳ್ಳಾಲ ಭಾರತ್ ಹೈಸ್ಕೂಲ್ನಲ್ಲಿ ಸೋಮವಾರ ಮತ ಎಣಿಕೆ ನಡೆಯಿತು. ತಹಸೀಲ್ದಾರ್ ರವಿಚಂದ್ರ ನಾಯಕ್ ಮತ ಎಣಿಕೆ ಉಸ್ತುವಾರಿ ವಹಿಸಿದ್ದರು.