ನಾಳೆಯಿಂದ 'ಇನ್ಸಿಡೆಂಟ್-2013' ಉತ್ಸವ
ಮಂಗಳೂರು: ಸುರತ್ಕಲ್ ಎನ್ಐಟಿಕೆ ವತಿಯಿಂದ 13 ರಿಂದ 17ರ ವರೆಗೆ ಕಾಲೇಜಿನ ಆವರಣದಲ್ಲಿ 'ಇನ್ಸಿಡೆಂಟ್-2013' ವಾರ್ಷಿಕ ಸಾಂಸ್ಕೃತಿಕ ಉತ್ಸವ ನಡೆಯಲಿದೆ. ಕಾರ್ಯಕ್ರಮವು ಸಂಜೆ 6ಕ್ಕೆ ಉದ್ಘಾಟನೆಗೊಳ್ಳಲಿದ್ದು, ರಿಲಾಯನ್ಸ್ ಗ್ರೂಪಿನ ಅಧ್ಯಕ್ಷ ಬಿ. ನಾರಾಯಣ, ಪಣಂಬೂರು, ಎಸಿಪಿ ರವಿಕುಮಾರ್ ಪಾಲ್ಗೊಳ್ಳುವರು. ಕಾಲೇಜಿನ ನಿರ್ದೇಶಕ ಪ್ರೊ. ಸ್ವಪನ್ ಭಟ್ಟಾಚಾರ್ಯ ಅಧ್ಯಕ್ಷತೆ ವಹಿಸುವರು ಎಂದು ಕಾರ್ಯಕ್ರಮದ ವಿದ್ಯಾರ್ಥಿ ಕಲ್ಯಾಣ ಶಾಖಾಧ್ಯಕ್ಷ ಪ್ರೊ. ಗೋಪಾಲ ಮುಗೆರಾಯ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನೃತ್ಯ, ಗಾಯನ, ನಾಟಕ ಪ್ರದರ್ಶನವಿದ್ದು, ಹತ್ತು ಸಾವಿರ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ ಎಂದರು.