ಪಾಲಿಕೆ ಮೇಯರ್ ಆಯ್ಕೆ ತಕ್ಷಣ ಸಾಧ್ಯವಿಲ್ಲ?
ಮಂಗಳೂರು: 2002ರಲ್ಲಿ ಪಾಲಿಕೆ ಮೇಯರ್ ಅಧಿಕಾರ ಕಾಂಗ್ರೆಸ್ ಪಡೆದಿತ್ತು, 2007ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂತು. ಈಗ ಮತ್ತೆ ಕಾಂಗ್ರೆಸ್ ಅಧಿಕಾರ ಪಡೆದಿದೆ. ಫೆಬ್ರವರಿಯಲ್ಲಿ ಮೇಯರ್ ಅವಧಿ ಮುಗಿದಿದೆ. ಇಷ್ಟಾದರೂ ತಕ್ಷಣಕ್ಕೆ ಕಾಂಗ್ರೆಸ್ಗೆ ಅಧಿಕಾರ ಸಿಗುವುದಿಲ್ಲ. ಯಾಕೆಂದರೆ ಇನ್ನೆರಡು ದಿನದಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯಾದರೆ, ಪುನಃ ನೀತಿ ಸಂಹಿತೆ ಅಡ್ಡಿಯಾಗುತ್ತದೆ. ಹಾಗಾಗಿ ಮೀಸಲಾತಿ ಘೋಷಣೆಯಾದರೂ ಮೇಯರ್, ಉಪಮೇಯರ್ ಆಯ್ಕೆ ಆಗದು. ಅಲ್ಲಿವರೆಗೆ ಜಿಲ್ಲಾಧಿಕಾರಿಯ ಆಡಳಿತಾಧಿಕಾರ ಮುಂದುವರಿಯುವ ಸಂಭವವೇ ಹೆಚ್ಚು.