34 ಕೆ.ಜಿ. ಗಾಂಜಾ ವಶ: ಮೂವರ ಸೆರೆ
ಮಂಗಳೂರು: ಅಕ್ರಮ ಗಾಂಜಾ ಮಾರಾಟ ಜಾಲವನ್ನು ಬೇಧಿಸಿದ ಕರಾವಳಿ ಕಾವಲು ಪೊಲೀಸರು ಮೂರು ಮಂದಿ ಆರೋಪಿಗಳನ್ನು ಬಂಧಿಸಿ 8.65 ಲಕ್ಷ ಮೌಲ್ಯದ 34.60 ಕೆ.ಜಿ. ಗಾಂಜಾ ವಶಪಡಿಸಿದ್ದಾರೆ. ಆರೋಪಿ ಮೈಸೂರಿನ ಸಯ್ಯದ್ ಅನೀಸ್ ಅಹ್ಮದ್(53), ಮನ್ಸೂರ್ ಅಹ್ಮದ್ (28) ಹಾಗೂ ಚಿಕ್ಕಮಗಳೂರಿನ ಅನ್ಸಾರ್ ಪಾಷಾ (45) ಬಂಧಿತರು. ಬಂಧಿತರಿಂದ 3 ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.