ಆಂಟಿ ಪ್ರೀತ್ಸೆ ಎಂದ ಕಾರ್ಮಿಕನಿಗೆ ಬಿತ್ತು ಸಖತ್ ಗೂಸಾ
ಕ.ಪ್ರ. ವಾರ್ತೆ ್ಣ ಮಂಗಳೂರು ್ಣ ಮಾ.13
ಮೊಬೈಲ್ನಲ್ಲಿ ಪರಿಚಿತಳಾದ ವಿವಾಹಿತ ಮಹಿಳೆ ಬರುವಳೆಂದು ಕೆಎಸ್ಆರ್ಟಿಸಿ ಬಸ್ ಸ್ಟ್ಯಾಂಡ್ನಲ್ಲಿ ಯುವಕನೊಬ್ಬ ಆಸೆಯಿಂದ ಕಾಯುತ್ತಿದ್ದ. ಆದರೆ ಬಂದವರು ಬಜರಂಗದಳದ ಕಟ್ಟು ಮಸ್ತಾದ ಯುವಕರು. ಬಂದವರೇ ಮುಖ ಮೂತಿ ನೋಡದೆ ನಾಲ್ಕು ಬಾರಿಸಿ ಪೊಲೀಸರ ಕೈಗೆ ಒಪ್ಪಿಸಿದ್ದಾರೆ.
ರಿಚಾರ್ಜ್ ಸೆಂಟರ್ ಬಳಿ ಸುಳಿದಾಡಿಕೊಂಡು ಮಹಿಳೆಯರ ಮೊಬೈಲ್ ಸಂಖ್ಯೆ ಹೇಗೊ ಗಳಿಸುತ್ತಿದ್ದ ಕೂಲಿ ಕಾರ್ಮಿಕ ಬಾಗಲಕೋಟೆ ಮೂಲದ ಬಸವರಾಜ ಮಹಿಳೆಯರಿಗೆ ಕರೆ ಮಾಡಿ ಸತಾಯಿಸುವುದನ್ನೇ ಚಟವಾಗಿಸಿಕೊಂಡಿದ್ದ. ಈ ಹಿಂದೆಯೂ ಅನೇಕ ಮಹಿಳೆಯರಿಗೆ ಅಶ್ಲೀಲ ಕರೆ ಮಾಡಿ, ಸಂಧಿಸುವಂತೆ ಬಲವಂತ ಮಾಡುತ್ತಿದ್ದ. ಈ ಬಗ್ಗೆ ಪೊಲೀಸರಿಗೆ ಕೆಲವುರು ದೂರು ನೀಡಿದ್ದು, ಬಸವರಾಜನಿಗೆ ಎಚ್ಚರಿಕೆ ನೀಡಲಾಗಿತ್ತು. ಇತ್ತೀಚೆಗೆ ಕೊಂಚಾಡಿಯ ವಿವಾಹಿತೆಯೊಬ್ಬರ ನಂಬರ್ ಪಡೆದು ಸತಾಯಿಸುತ್ತಿದ್ದ. ಆಕೆ ಎಚ್ಚರಿಸಿದ್ದರೂ ಕೊಳಕುಬುದ್ಧಿ ಬಿಟ್ಟಿರಲಿಲ್ಲ. ಮಹಿಳೆ ಕೊನೆಗೆ ಬಜರಂಗದಳದ ಮೊರೆ ಹೋದರು. ಅದರಂತೆ ಕಾರ್ಮಿಕನನ್ನು ಸಂಧಿಸುವ ಬಗ್ಗೆ ಮಹಿಳೆ ಸಮ್ಮತಿ ಸೂಚಿಸಿದಳು. ಏಕಾಏಕಿ ಪರಿವರ್ತನೆಯಿಂದ ಸಂಶಯಿತನಾದ ಕಾರ್ಮಿಕ ಭೇಟಿ ಸ್ಥಳವನ್ನು ಪದೇ ಪದೇ ಬದಲಾಯಿಸುತ್ತಿದ್ದ. ಆದರೆ ಮಂಗಳವಾರ ಮಾತ್ರ ಕೆಎಸ್ಆರ್ಟಿಸಿ ಸ್ಟ್ಯಾಂಡ್ ಬಳಿ ಸಿಗಲು ಒಪ್ಪಿದ್ದ. ಆದರೆ ಆಸೆಯಿಂದ ಬಂದವನಿಗೆ ಸಿಕ್ಕಿದ್ದು ಗೂಸಾ!