ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಕಡಲಿಗೆ ಹಾರಿದ ಮಹಿಳೆ ರಕ್ಷಣೆ

Lingaraj Badiger
Updated On : 14 Mar 2013, 11:51 am

ಮಂಗಳೂರು: ಸೋಮೇಶ್ವರ ಬೀಚ್ ಬಳಿ ಕಡಲಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಉಳ್ಳಾಲ ಚೆಂಬುಗುಡ್ಡೆಯ ವಿವಾಹಿತ ಮಹಿಳೆಯನ್ನು ಜೀವರಕ್ಷಕ ದಳದವರು ರಕ್ಷಿಸಿದ್ದಾರೆ.   ಬುಧವಾರ ಮದ್ಯಾಹ್ನ 3 ಗಂಟೆಗೆ ಸೋಮೇಶ್ವರ ಕಲ್ಲುಗಳ ರಾಶಿಯಿಂದ 40ರ ಹರೆಯದ ಮಹಿಳೆ ಕಡಲಿಗೆ ಹಾರಿದ್ದು, ಇದನ್ನು ನೋಡಿದ ಪಣಂಬೂರು ತೀರ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆ ಜೀವಕ್ಷಕ ದಳದವರು ಮಹಿಳೆಯನ್ನು ಕಡಲಿಂದ ಎಳೆದು ತೀರಕ್ಕೆ ತಂದರು. ಮಹಿಳೆಯನ್ನು ಸುರಕ್ಷಾ ವಾಹನದಲ್ಲಿ ದೇರಳಕಟ್ಟೆ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಟ್ರಸ್ಟ್ ಸಿಇಒ ಯತೀಶ್ ಬೈಕಂಪಾಡಿ ತಿಳಿಸಿದ್ದಾರೆ. ಮಹಿಳೆ ಅಪಾಯದಿಂದ ಪಾರಾಗಿದ್ದಾರೆ. ಸಂಸಾರ ಕಲಹವೇ ಆತ್ಮಹತ್ಯೆ ಯತ್ನಕ್ಕೆ ಕಾರಣ ಎನ್ನಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement