ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಸರ್ಪಸಂಸ್ಕಾರದಲ್ಲಿ ಶವಸಂಸ್ಕಾರ ಸೌಲಭ್ಯವಿಲ್ಲ

Rashmi Kasaragodu
Updated On : 14 Mar 2013, 1:17 am

ಕ.ಪ್ರ. ವಾರ್ತೆ ್ಣ ಸುಬ್ರಹ್ಮಣ್ಯ ್ಣ ಮಾ. 13
ಸರ್ಪ ಸಂಸ್ಕಾರಕ್ಕೆ ಹೆಸರುವಾಸಿಯಾದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಶವ ಸಂಸ್ಕಾರಕ್ಕೆ ಸೂಕ್ತ ವ್ಯವಸ್ಥೆಯೇ ಇಲ್ಲ. ಶವ ಸಂಸ್ಕಾರಕ್ಕೆಂದು ಸೂಕ್ತ ಸ್ಥಳ ಗುರುತಿಸಿ ಅದನ್ನು ನೀಡಲಾಗಿದ್ದರೂ, ಮೂಲ ಸೌಲಭ್ಯಗಳಿಲ್ಲದೆ ರುದ್ರಭೂಮಿಯ ಬಯಲಲ್ಲೇ ಶವ ಹೂಳುವ, ಸುಡುವ ಕಾರ್ಯ ಎಗ್ಗಿಲ್ಲದೆ ಸಾಗಿದೆ.
ಕುಕ್ಕೆ ಸುಬ್ರಹ್ಮಣ್ಯ ಅತ್ಯಂತ ಹೆಸರುವಾಸಿ ಪುಣ್ಯ ಕ್ಷೇತ್ರ. ನಾಗಾರಾಧನೆ ಸೇರಿದಂತೆ ಸರ್ಪ ಸಂಸ್ಕಾರದ ಕೇಂದ್ರ ಬಿಂದು. ಇಲ್ಲಿಗೆ ಬರುವ ಲಕ್ಷಗಟ್ಟಲೇ ಜನರು ಮತ್ತು ಅಭಿವೃದ್ಧಿ ಹೊಂದುತ್ತಾ ಬೆಳೆಯುತ್ತಿರುವ ಇಲ್ಲಿ ಆಧುನಿಕ ಚಿತಾಗಾರವೇ ಇಲ್ಲ. ಸುಬ್ರಹ್ಮಣ್ಯ ಗ್ರಾಪಂ ಆಡಳಿತ ಇಂಜಾಡಿ ಎಂಬಲ್ಲಿ ಶವ ಸಂಸ್ಕಾರಕ್ಕೆಂದು ಜಾಗ ಮೀಸಲಿಟ್ಟಿದೆ. ಆದರೆ ಮೂಲ ಸೌಲಭ್ಯದ ಕೊರತೆಯಿಂದ ಬಯಲಲ್ಲೇ ಶವ ಧಪನಗೊಳಸುವ ದುಸ್ಥಿತಿ ಇದೆ. ಅಲ್ಲದೆ ರುದ್ರಭೂಮಿ ಬಯಲು ಪ್ರದೇಶದಲ್ಲಿರುವುದರಿಂದ ಚಾವಣಿ ಇಲ್ಲದ ಕಾರಣ ಮಳೆಗಾಲದಲ್ಲಿ ಶವಸಂಸ್ಕಾರ ಮಾಡಲು ತುಂಬಾ ಕಷ್ಟವಾಗುತ್ತಿದೆ. ಮಳೆಬಂದರೆ ಬೆಂಕಿ ನಂದಿಹೋಗಿ ಶವಗಳು ಅರ್ಧ ಸುಟ್ಟು ಉಳಿದ ಭಾಗವನ್ನು ನಾಯಿ ಮೊದಲಾದ ಪ್ರಾಣಿಗಳು ಎಳೆದಾಡಿ ಪರಿಸರವನ್ನು ಹಾಳು ಮಾಡುತ್ತಿವೆ. ಸರ್ಕಾರ ಗ್ರಾಮೀಣ ಮತ್ತು ನಗರಗಳಲ್ಲಿ ರುದ್ರಭೂಮಿ ಹಾಗೂ ಆಧುನಿಕ ಚಿತಾಗಾರ ಒದಗಿಸಲು ನೆರವು ನೀಡುತ್ತಿದೆ. ಆದರೆ ಇಲ್ಲಿ ಯಾವುದೇ ವ್ಯವಸ್ಥೆಗಳಿಲ್ಲ. ಭದ್ರತಾ ಸಿಬ್ಬಂದಿ, ಪ್ರಾರ್ಥನಾ ಮಂದಿರ, ಶೌಚಾಲಯ, ವಿದ್ಯುತ್ ಚಿತಾಗಾರದ ವ್ಯವಸ್ಥೆ ಇಲ್ಲದಿರುವುದರಿಂದ ಇಲ್ಲಿನ ಸ್ಥಿತಿ ಚಿಂತಾಜನಕವಾಗಿದೆ. ಗ್ರಾಪಂ ಮತ್ತು ಸ್ಥಳೀಯ ದೇವಾಲಯದ ಆಡಳಿತ ಈ ಸಮಸ್ಯೆ ಬಗ್ಗೆ ಈವರೆಗೂ ಸ್ಪಂದಿಸಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement