ಇಂದು ವಿದ್ಯುತ್ ಇಲ್ಲ
ಮಂಗಳೂರು: ಕುಲಶೇಖರ ವಿದ್ಯುತ್ ಉಪಕೇಂದ್ರದಿಂದ ಅಶೋಕ್ನಗರ, ನಂತೂರು, ಇಂಡಸ್ಟ್ರಿಯಲ್ ಏರಿಯ, ಶಕ್ತಿನಗರ, ಕುಡುಪು ಮತ್ತು ಕೆನರಾ ವರ್ಕ್ ಶಾಪ್ಗಳ ಫೀಡರ್ನಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ನಡೆಯಲಿರುವುದರಿಂದ 15 ರಂದು ಬೆಳಗ್ಗೆ 10 ರಿಂದ ಸಂಜೆ 5ರ ತನಕ ವಿದ್ಯುತ್ ನಿಲುಗಡೆಗೊಳ್ಳಲಿದೆ. ವಿದ್ಯುತ್ ನಿಲುಗಡೆಗೊಳ್ಳುವ ಪ್ರದೇಶ: ಮರೋಳಿ, ಕುಲಶೇಖರ, ನಂತೂರು, ಇಂಡಸ್ಟ್ರೀಯಲ್ ಏರಿಯಾ, ಶಕ್ತಿನಗರ, ಕುಡುಪು, ಸುತ್ತಮುತ್ತಲಿನ ಪ್ರದೇಶ.
ಸಹಾಯಧನಕ್ಕೆ ಅರ್ಜಿ ಆಹ್ವಾನ
ಮಂಗಳೂರು: ಜಿಲ್ಲೆಯ ಹೊಸದಾಗಿ ಅಮೃತ ಯೋಜನೆ ಜಾರಿಗೆ ತಂದಿದ್ದು, ಯೋಜನೆಯಲ್ಲಿ ಕೃಷಿ ಯೋಗ್ಯ ಖರೀದಿಗೆ ಸಹಾಯಧನ ನೀಡಲಾಗುವುದು. ಕೃಷಿಕರ ಅಗತ್ಯತೆಯ ಹಸಿರೆಲೆ ಗೊಬ್ಬರದ ಬೀಜಗಳ ಖರೀದಿ, ದೇಶೀಯ ಬೀಜಗಳ ಖರೀದಿ, ಎರೆತೊಟ್ಟಿ ನಿರ್ಮಾಣ, ಕಾಂಪೋಸ್ಟ್ ತೊಟ್ಟಿ ನಿರ್ಮಾಣ, ಜೇನು ಸಾಕಾಣಿಕೆ ಪೆಟ್ಟಿಗೆ, ಪ್ಲಾಸ್ಟಿಕ್ ತಾಡಾಪತ್ರೆಗಳ ಖರೀದಿಗೆ ಸಹಾಯಧನ ನೀಡಲಾಗುವುದು. ಒಂದು ಎಕರೆ ಜಮೀನಿರುವ ರೈತರು ಸಹಾಯಧನಕ್ಕೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಆಯಾ ತಾಲೂಕಿನ ತೋಟಗಾರಿಕೆ ಕಚೇರಿ, ದೂ. 08242423628 ಸಂಪರ್ಕಿಸಬಹುದು.
--
ಇಂದು ಜನಜಾಗೃತಿ ಕಾರ್ಯಕ್ರಮ
ಬೆಳ್ತಂಗಡಿ: ಸ್ವದೇಶಿ ಜಾಗರಣ ಮಂಚ್ ಹಾಗೂ ಉಜಿರೆ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಆಶ್ರಯದಲ್ಲಿ ಚಿಲ್ಲರೆ ವ್ಯಾಪರಕ್ಕೆ ವಿದೇಶಿ ಬಂಡವಾಳ(ಎಫ್ಡಿಐ) ಅಪಾಯದ ಹಲವು ಮುಖಗಳು ಜನಜಾಗೃತಿ ಕಾರ್ಯಕ್ರಮ ಮಾ.15 ರಂದು ರಾತ್ರಿ 8 ಗಂಟೆಗೆ ಉಜಿರೆ ಶ್ರೀ ಶಾರದಾ ಮಂಟಪದಲ್ಲಿ ನಡೆಯಲಿದೆ. ಸ್ವದೇಶಿ ಜಾಗರಣ ಮಂಚ್ ರಾಜ್ಯ ಸಂಘಟನಾ ಕಾರ್ಯದರ್ಶಿ ಕೆ. ಜಗದೀಶ್ ಮುಖ್ಯ ಭಾಷಣ ಮಾಡಲಿದ್ದಾರೆ. ಉಜಿರೆ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಪಿ. ಪಾಂಡುರಂಗ ಬಾಳಿಗ ಅಧ್ಯಕ್ಷತೆ ವಹಿಸಲಿದ್ದಾರೆ.
ಇಂದು ಮಹಾಗಣಯಾಗ
ಬೆಳ್ತಂಗಡಿ: ಲೋಕ ಕಲ್ಯಾಣಾರ್ಥವಾಗಿ ಮಾ.15 ರಂದು ನಿತ್ಯಾನಂದ ನಗರದ ಕನ್ಯಾಡಿ ಶ್ರೀರಾಮ ಕ್ಷೇತ್ರದಲ್ಲಿ ಅಷ್ಟೋತ್ತರ ಸಹಸ್ರ ನಾರೀಕೇಳ ಮಹಾಗಣಯಾಗ ನಡೆಯಲಿದೆ. ಬ್ರಹ್ಮಶ್ರೀ ವೇದಮೂರ್ತಿ ಕೋಣಂದೂರು ಗೋಪಾಲಕೃಷ್ಣ ಆಚಾರ್ಯರ ನೇತೃತ್ವದಲ್ಲಿ ಯಾಗ ನಡೆಯಲಿದೆ. ಪೂರ್ಣಾಹುತಿ ಸಂದರ್ಭ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿಯವರಿಂದ ಆಶೀರ್ವಚನವಿರುತ್ತದೆ. ಒಂದು ಕಾಯಿ ಗಣಹೋಮದ ಬಾಬ್ತು ರು. 300ಗಳ ಕೂಪನ್ ಅನ್ನದಾನಕ್ಕೆ 10,001 ಮತ್ತು 5,001ಗಳ ಸೇವಾ ಕಾರ್ಯ ನಡೆಸಲು ಅವಕಾಶವಿರುತ್ತದೆ. ಸುಮಾರು ರು. 7 ಲಕ್ಷ ವೆಚ್ಚವಾಗಲಿದೆ. ಯಾಗಕ್ಕೆ ಮನೆಗಳಿಂದ ಅಕ್ಕಿ, ಬೆಲ್ಲ, ಎಳ್ಳುನೀರು, ತೆಂಗಿನಕಾಯಿ, ಹೂವು, ತುಪ್ಪ, ತರಕಾರಿ, ಹಣ್ಣುಹಂಪಲು, ಅಡಿಕೆ ಮುಂತಾದವುಗಳನ್ನು ಸಮರ್ಪಿಸುವ ವ್ಯವಸ್ಥೆಯನ್ನೂ ಮಾಡಲಾಗಿದೆ ಮತ್ತು ಸುಮಾರು 5 ಸಾವಿರ ಮಂದಿಗೆ ಅನ್ನದಾನ ವ್ಯವಸ್ಥೆ ಕೂಡ ಮಾಡಲಾಗಿದೆ ಎಂದು ಗಣಯಾಗ ಸಮಿತಿ ಅಧ್ಯಕ್ಷ ರವೀಂದ್ರ ಪೂಜಾರಿ ಆರ್ಲ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.