ಹಿಂದೂ ಧರ್ಮ ಅವಹೇಳನ: ಒವೈಸಿ ವಿರುದ್ಧ ಪುತ್ತೂರಿನಲ್ಲಿ ಪ್ರಕರಣ ದಾಖಲು
ಪುತ್ತೂರು: ಹಿಂದೂ ಧರ್ಮ ಮತ್ತು ಹಿಂದುಗಳ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ ಕೋಮುಪ್ರಚೋದನೆಗೆ ಆಸ್ಪದ ನೀಡಿರುವ ಆರೋಪದಲ್ಲಿ ಆಂಧ್ರಪ್ರದೇಶದ ಶಾಸಕ ಒವೈಸಿ ಅಕ್ಬರುದ್ದೀನ್ ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಂಧ್ರಪ್ರದೇಶದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿಂದುಗಳ ವಿರುದ್ಧ ಮತ್ತು ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಆಂಧ್ರಪ್ರದೇಶದ ಶಾಸಕ ಒವೈಸಿ ಅಕ್ಬರುದ್ದೀನ್ ಅವರು ಭಾಷಣ ಮಾಡಿ ಹಿಂದುಗಳ ಧಾರ್ಮಿಕ ಭಾವೆನಯನ್ನು ಕೆರಳಿಸಿದ್ದಾರೆ. ಮಾತ್ರವಲ್ಲದೆ ಕೋಮುಪ್ರಚೋದನಾಕಾರಿಯಾಗಿ ಹೇಳಿಕೆ ನೀಡುವ ಮೂಲಕ ಹಿಂದುಗಳನ್ನು ಕೆರಳಿಸುವಂತೆ ಮಾಡಿದ್ದಾರೆ ಎಂದು ಆರೋಪಿಸಿ ಬಜರಂಗದಳದ ಜಿಲ್ಲಾ ಸಂಚಾಲಕ ದಿನೇಶ್ ಕುಮಾರ್ ಜೈನ್ ಪುತ್ತೂರು ನ್ಯಾಯಾಲಯದಲ್ಲಿ ಖಾಸಗಿ ದಾವೆ ಹೂಡಿದ್ದರು.
ವಿಚಾರಣೆ ನಡೆಸಿದ ನ್ಯಾಯಾಲಯವು ಶಾಸಕ ಅಕ್ಬರುದ್ದೀನ್ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುವಂತೆ ನಗರ ಪೊಲೀಸರಿಗೆ ಆದೇಶಿಸಿದೆ.