ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಅಪರಿಚಿತರಿಂದ ಹಲ್ಲೆ

Lingaraj Badiger
Updated On : 16 Mar 2013, 11:39 am

ಮೂಲ್ಕಿ: ಮೂಲ್ಕಿಯ ಕೇಬಲ್ ನೆಟ್‌ವರ್ಕ್‌ನ ಉದ್ಯೋಗಿ ಮೂಲ್ಕಿಯ ಚಿತ್ರಾಪುವಿನ ಜೀವನ್ ಪೂಜಾರಿ ಎಂಬವರ ಮೇಲೆ ಕೇಬಲ್ ಕಚೇರಿಯ ಬಳಿ ಶುಕ್ರವಾರ ಮಧ್ಯಾಹ್ನ ಸುಮಾರು 8 ಮಂದಿ ಅಪರಿಚಿತರು ಆಗಮಿಸಿ ಹೆಲ್ಮೆಟ್ ಹಾಗೂ ಕೈಯಿಂದ ಹೊಡೆದು ಹಲ್ಲೆ ನಡೆಸಿದ್ದಾರೆ. ತೀವ್ರ ಗಾಯಗೊಂಡ ಜೀವನ್ ಪೂಜಾರಿ ಮೂಲ್ಕಿಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದು,  ಹಲ್ಲೆ ಬಗ್ಗೆ ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಲೆಮರೆಸಿದ್ದ ಆರೋಪಿ ಸೆರೆ
ವಿಟ್ಲ: ಮೂರು ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.  ಮಾಣಿಲ ಗ್ರಾಮದ ಇಂತು ಕ್ರಾಸ್ತ ಅವರ ಪುತ್ರ ವಿಜಯಕುಮಾರ್ ಕ್ರಾಸ್ತ ಬಂಧಿತ ಆರೋಪಿ. ಈತ 2010ರಲ್ಲಿ ಒಂದು ಹಾಗೂ 2011ರಲ್ಲಿ ಎರಡು ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಎನ್ನಲಾಗಿದೆ. ಖಚಿತ ಮಾಹಿತಿ ಮೇರೆಗೆ ವಿಟ್ಲ ಠಾಣೆ ಸಿಬ್ಬಂದಿ ರಕ್ಷಿತ್ ರೈ, ರಮೇಶ್, ಲೋಕೇಶ್, ಬಾಲಕೃಷ್ಣ  ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಅಪಘಾತ: ಮಹಿಳೆಗೆ ಗಾಯ
ಮೂಲ್ಕಿ: ಕಿನ್ನಿಗೋಳಿ ಸಮೀಪದ ಪದ್ಮನೂರು ಬಳಿ ರಿಕ್ಷಾವೊಂದು ಎದುರಿನಿಂದ ಬರುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಸ್ಕಿಡ್ ಆಗಿ ಬಿದ್ದಿದೆ. ರಿಕ್ಷಾದಲ್ಲಿದ್ದ ಅಂಗರಗುಡ್ಡೆ ನಿವಾಸಿ ಪ್ರಮೀಳಾ ಗಾಯಗೊಂಡು ಕಿನ್ನಿಗೋಳಿಯ ಕನ್ಸೆಟ್ಟಾ ಆಸ್ಪತ್ರೆಗೆ ದಾಖಲಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement