ರಾಜಕೀಯ ಘರ್ಷಣೆ ಹಿನ್ನೆಲೆ: ತರಕಾರಿ ಅಂಗಡಿಗೆ ಬೆಂಕಿ
ಮಂಗಳೂರು: ಕುಂಜತ್ತಬೈಲ್ ರಾಜಕೀಯ ಘರ್ಷಣೆ ಹಿನ್ನೆಲೆಯಲ್ಲಿ ಕಾವೂರಿನ ತರಕಾರಿ ಮಳಿಗೆಗೆ ದುಷ್ಕರ್ಮಿಗಳು ಬೆಂಕಿ ಇಕ್ಕಿದ್ದಾರೆ. ತರಕಾರಿ ಅಂಗಡಿ ಅಬ್ಬಾಸ್ಗೆ ಸೇರಿದೆ. ಶುಕ್ರವಾರ ಬೆಳಗ್ಗೆ 5 ಗಂಟೆಗೆ ಮಳಿಗೆ ತೆರೆಯಲು ಬಂದಾಗ ಬೆಂಕಿ ಹಾಕಿರುವುದು ಗೊತ್ತಾಯಿತು. ಏಕೆ ನನ್ನ ಮಳಿಗೆಗೆ ಬೆಂಕಿ ಇಟ್ಟಿದ್ದಾರೆ ಎಂದು ಗೊತ್ತಿಲ್ಲ ಎನ್ನುತ್ತಾರೆ ಅಬ್ಬಾಸ್. ತರಕಾರಿ ಮಳಿಗೆ ಅಕ್ಕ, ಪಕ್ಕ ಇನ್ನು ಅನೇಕ ಮಳಿಗೆಗಳಿದ್ದರೂ ಅವು ಯಾವುದಕ್ಕೂ ಬೆಂಕಿ ತಗುಲಿರಲಿಲ್ಲ. ಅಬ್ಬಾಸ್ ಕುಂಜತ್ತಬೈಲ್ ನಿವಾಸಿ. ಹೀಗಾಗಿ ಕುಂಜತ್ತಬೈಲ್ನಲ್ಲಿ ಘರ್ಷಣೆ ಹಿನ್ನೆಲೆಯಲ್ಲಿ ಬೆಂಕಿ ಹಾಕಿರಬಹುದು ಎಂದು ಶಂಕಿಸಲಾಗಿದೆ.