ಸಾಲ ಕೊಡದ್ದಕ್ಕೆ ಮುಖ ಜಜ್ಜಿದರು!
ಮಂಗಳೂರು: ಟೀವಿ ಸಾಲ ಕಂತು ಪಾವತಿಸದ್ದಕ್ಕೆ ಬಜಾಜ್ ಹಣಕಾಸು ಸಂಸ್ಥೆ ವಸೂಲಿಗಾರರು ಸೋಮೇಶ್ವರ ಉಚ್ಚಿಲ ಚೇತನ್ ಸುವರ್ಣ ಅವರ ಮುಖಕ್ಕೆ ಜಲ್ಲಿ ಕಲ್ಲಿನಿಂದ ಜಜ್ಜಿ ಹಾಕಿದ್ದಾರೆ! ಚೇತನ್ ಬೈಕ್ನಲ್ಲಿ ಮಹಾಕಾಳಿಪಡ್ಪು ಬಳಿ ಹೋಗುತ್ತಿದ್ದಾಗ ತಡೆದು ನಿಲ್ಲಿಸಿದ ಇಬ್ಬರು ವಸೂಲಿಗಾರರು ಅಶ್ಲೀಲವಾಗಿ ಬೈದು ಟೀವಿ ಲೋನ್ ಕಟ್ಟಲು ಸಂಕಟವಾ ಎಂದು ಪ್ರಶ್ನಿಸಿ ಜಲ್ಲಿ ಕಲ್ಲಿನಿಂದ ತಲೆಗೆ ಹೊಡೆದಿದ್ದಾರೆ. ಕಂತು ಕಟ್ಟದಿದ್ದರೆ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ. ಪಾಂಡೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.