ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಕೆಎಸ್ಸಾರ್ಟಿಸಿ ಕೆಲ ಬಸ್ ಸಂಚಾರ ರದ್ದುಮಾಡಲು ಚಿಂತನೆ

Mainashree
Updated On : 18 Mar 2013, 11:35 am

ಪುತ್ತೂರು: ಡೀಸೆಲ್ ಮೇಲಿನ ಸಬ್ಸಿಡಿ ಕಡಿತದಿಂದಾಗಿ ಪುತ್ತೂರು ಕೆಎಸ್ಆರ್ಟಿಸಿ ವಿಭಾಗಕ್ಕೆ ಪ್ರತೀ ದಿನ ರು. 1.65 ಲಕ್ಷ ನಷ್ಟವಾಗುತ್ತಿದ್ದು, ಈ ಹಿನೆಲೆಯಲ್ಲಿ ಗ್ರಾಮಾಂತರ ಪ್ರದೇಶದ ನಷ್ಟದಲ್ಲಿರುವ ಮಾರ್ಗಗಳ ಸಂಚಾರ ಸ್ಥಗಿತಕ್ಕೆ ಚಿಂತನೆ ನಡೆಸಲಾಗಿತ್ತು ಎಂದು ಕೆಎಸ್ಆರ್ಟಿಸಿ ಅಧಿಕಾರಿಯವರು ಶನಿವಾರ ನಡೆದ ಪುತ್ತೂರು ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಮಾಹಿತಿ ನೀಡಿದರು.
ತಾಲೂಕು ಪಂಚಾಯಿತಿ ಅಧ್ಯಕ್ಷೆ ಶಶಿಪ್ರಭಾ ಸಂಪ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಗ್ರಾಮಾಂತರ ಪ್ರದೇಶಗಳಿಗೆ ಸಂಚರಿಸುವ ಬಸ್ಗಳ ನಿಲುಗಡೆಯಾಗುವ ಸುದ್ದಿ ಇದೆ. ಇದಕ್ಕೆ ಕಾರಣ ಏನು ಎಂದು  ಸದಸ್ಯ  ಶಂಭು ಭಟ್ ಪ್ರಶಿಸಿದರು.
ಇದಕ್ಕೆ ಉತ್ತರಿಸಿದ ಕೆಎಸ್ಆರ್ಟಿಸಿ ಅಧಿಕಾರಿ, ಒಟ್ಟು 158 ರೂಟ್ನಲ್ಲಿ 580 ಟ್ರಿಪ್ ಈಗ ಇದೆ. ಈ ಪೈಕಿ  116 ಟ್ರಿಪ್ಗಳನು ನಷ್ಟದಲ್ಲಿ ಓಡಿಸಲಾಗುತ್ತಿದೆ. 42 ರೂಟ್ ತೀರಾ ನಷ್ಟದಲ್ಲಿದೆ. ಹೀಗಾಗಿ ಕೆಲ ಬಸ್ಗಳ ಸಂಚಾರ ರದ್ದು  ಮಾಡಲು ನಿರ್ಧಾರ ಮಾಡಲಾಗಿತ್ತು. ಆದರೆ, ಬಸ್ ಪಾಸ್ ವಿತರಿಸಿದ್ದರಿಂದ ಈಗ ರದ್ದು ಮಾಡಿಲ್ಲ. ಸದ್ಯ  ಹೆಚ್ಚುವರಿ ಓಡಾಟ, ಹೊಸ ರೂಟ್ಗಳು ಪ್ರಸ್ತಾವನೆಯಲ್ಲಿ ಇಲ್ಲ ಎಂದು ಸ್ಪಷ್ಟ ಪಡಿಸಿದರು.
ಸಮಸ್ಯೆಗೆ ಇದು ಪರಿಹಾರವಲ್ಲ, ಸಾಂಬಾರು ಹುಡಿಯನೇ ಬದಲಾಯಿಸಲು ಕ್ರಮಕೈಗೊಳ್ಳಬೇಕು ಎಂದು ಸದಸ್ಯರು ಆಗ್ರಹಿಸಿದರು. ಸದಸ್ಯರಾದ ದಿನೇಶ್ ಮದು, ಪುಲಸ್ಯ ರೈ, ಶಂಭು ಭಟ್, ಜೊಹಾರಾ ನಿಸಾರ್, ಉಷಾ ಅಂಚನ್, ಮಹಮ್ಮದ್ ಬಡಗನೂರು, ತಾ.ಪಂ. ಉಪಾಧ್ಯಕ್ಷ ಬಾಬು ಮಾದೋಡಿ, ಸ್ಥಾಯಿ ಸಮಿತಿ  ಅಧ್ಯಕ್ಷ ದಯಾನಂದ ಆಲಡ್ಕ, ತಹಸೀಲ್ದಾರ್ ಕುಳ್ಳೇ ಗೌಡ, ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಪುಟ್ಟರಾಜು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement