ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಕೆಜೆಪಿಗೆ ನಿರೀಕ್ಷಿತ ಗೆಲವು ಸಿಕ್ಕಿಲ್ಲ: ಸಿ.ಟಿ. ರವಿ

Mainashree
Updated On : 18 Mar 2013, 11:48 am

ಮಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಂದುಕೊಂಡದ್ದನು ಸಾಧಿಸುವಲ್ಲಿ ಸಫಲರಾಗಿಲ್ಲ. ಸ್ಥಳಿಯಾಡಳಿತ ಚುನಾವಣೆಯಲ್ಲಿ ಕೆಜೆಪಿ ನಿರೀಕ್ಷಿಸಿದಷ್ಟು ಗೆಲವು ಸಾಧಿಸಿಲ್ಲ ಎಂದು ಉನತ ಶಿಕ್ಷಣ ಸಚಿವ ಸಿ.ಟಿ.ರವಿ ಹೇಳಿದ್ದಾರೆ. ಭಾನುವಾರ ಮಂಗಳೂರಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಸಚಿವ ರವಿ, ಹೆಚ್ಚಿನ ಶಾಸಕರನು ಸೆಳೆಯಲು ಕೆಜೆಪಿ ಸಫಲವಾಗಿಲ್ಲ. ಸರ್ಕಾರವನು ಉರುಳಿಸಲೂ ಸಾಧ್ಯವಾಗಿಲ್ಲ. ಚುನಾವಣೆಯಲ್ಲಿ ಬಿಜೆಪಿಯನು ಕೆಲವೆಡೆ ಸೋಲಿಸುವಲ್ಲಿ ಕೆಜೆಪಿ ಯಶಸ್ಸು ಗಳಿಸಿದೆ. ಇದು ತಾತ್ಕಾಲಿಕ ಎಂದು  ವಿಶ್ಲೇಷಿಸಿದರು.
ಸೋಲೇ ಸವಾಲು: ಪಕ್ಷದ ಆಂತರಿಕ ಸಮಸ್ಯೆಯಿಂದ ಬಿಜೆಪಿಗೆ ಹಿನಡೆಯಾಗಿರಬಹುದು. ನಾವು ಅದನು ಸರಿಪಡಿಸಿಕೊಳ್ಳುತ್ತೇವೆ. ಸೋಲನು ಸವಾಲಾಗಿ ಸ್ವೀಕರಿಸುತ್ತೇವೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಪುಟಿದೆದ್ದು ಬರುತ್ತೇವೆ ಎಂದು ಸಿ.ಟಿ.ರವಿ ವಿಶ್ವಾಸ ವ್ಯಕ್ತಪಡಿಸಿದರು.
  ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಜನರು ಬಿಜೆಪಿಯನು ಕೈ ಬಿಟ್ಟು ಕಾಂಗ್ರೆಸ್ನಲ್ಲಿ ವಿಶ್ವಾಸ ಇರಿಸಿದ್ದು, ಬೇಸರ ಮತ್ತು ದುಃಖ ಉಂಟುಮಾಡಿದೆ. ಕೇಂದ್ರ ದುರಾಡಳಿತ ಮತ್ತು ಬಿಜೆಪಿ ಸರ್ಕಾರದ ಸಾಧನೆಯನು ಜನರಿಗೆ ಮನವರಿಕೆ ಮಾಡಿಕೊಂಡುವಲ್ಲಿ ನಾವು ವಿಫಲರಾಗಿದ್ದೇವೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement