ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಬಸವ ವಸತಿ ಯೋಜನೆಯಿಂದ 6 ಲಕ್ಷಕ್ಕೂ ಅಧಿಕ ಮಂದಿಗೆ ಸೂರು: ವಿ. ಸೋಮಣ್ಣ

Mainashree
Updated On : 18 Mar 2013, 11:38 am

ಮಂಗಳೂರು: ಬಸವ ವಸತಿ ಯೋಜನೆಯಿಂದ 6 ಲಕ್ಷಕ್ಕೂ ಮೇಲ್ಪಟ್ಟ ಜನರಿಗೆ ವಸತಿ ಒದಗಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಕೇಂದ್ರದ ಇಂದಿರಾ ಆವಾಸ್ 37 ಸಾವಿರ ಜತೆಯಲ್ಲಿ ರಾಜ್ಯ ಸರ್ಕಾರ 42 ಸಾವಿರ ನೀಡಿ ಮನೆಗಳನು ನೀಡುತ್ತಿವೆ. ಕೊಳಚೆ ನಿರ್ಮೂಲನೆ ಮಂಡಳಿಯಿಂದ 100 ಕೋಟಿ ವೆಚ್ಚದಲ್ಲಿ ಮನೆಗಳನು ನಿರ್ಮಿಸಲಾಗಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.
ಮಧ್ಯಮ ವರ್ಗದವರಿಗೆ ಸೂರು ಒದಗಿಸುವ ದೃಷ್ಟಿಯಿಂದ ಕರ್ನಾಟಕ ಗೃಹಮಂಡಳಿ ಕುಡುಪು ಮತ್ತು ಕೋಟೆಕಾರ್ ಬಡಾವಣೆಯಲ್ಲಿ ನಿರ್ಮಿಸಿದ 286 ಮನೆಗಳನೊಳಗೊಂಡ ಬಹುಮಹಡಿ ವಸತಿ ಸಮುಚ್ಚಯಗಳಿಗೆ  ಭಾನುವಾರ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಹಿಂದಿನ 56 ವರ್ಷಗಳಲ್ಲಿ 4 ಸಾವಿರ ಮನೆ ವಿತರಿಸಿದರೆ ಬಿಜೆಪಿ ಸರ್ಕಾರ ಆಡಳಿತದಲ್ಲಿ 40 ಸಾವಿರಕ್ಕೂ ಅಧಿಕ ಸೈಟ್ ಮತ್ತು 12 ಸಾವಿರಕ್ಕೂ ಹೆಚ್ಚು ಮನೆಗಳನು ನಿರ್ಮಿಸಿದೆ. ಮನೆ ನಿರ್ಮಾಣ ಜತೆ ಮೂಲಭೂತ ಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ರಾಜ್ಯದ ಎಲ್ಲ 30 ಜಿಲ್ಲಾ ಕೇಂದ್ರಗಳಲ್ಲಿಯೂ ಯೋಜನೆ ಅನುಷ್ಠಾನಕ್ಕೆ ತರಲಾಗಿದೆ ಎಂದು ಹೇಳಿದರು.
ಬಸವ ವಸತಿ ಯೋಜನೆ ಲಾಕ್ ತೆರವು: ಬಸವ ವಸತಿ ಯೋಜನೆಯಡಿ ಮಂಗಳೂರಲ್ಲಿ 30 ಸಾವಿರ ಮನೆ ನೀಡಿದ್ದು, ಕಾಮಗಾರಿ ಆರಂಭಿಸದ ಹಿನೆಲೆಯಲ್ಲಿ ಖಾತೆಗಳು ಲಾಕ್ ಆದ ವಿಚಾರ ತಿಳಿದಿದೆ. ಅಧಿಕಾರಿಗಳು ಮುತುವರ್ಜಿ ವಹಿಸದ ಕಾರಣ ಹೀಗಾಗಿದೆ. ಸದ್ಯಕ್ಕೆ ಮಾಡಿದ ಲಾಕ್ ತೆರೆಯುವಂತೆ ಆದೇಶ ನೀಡಿದ್ದೇನೆ ಎಂದು ವಿ.ಸೋಮಣ್ಣ ಹೇಳಿದರು.
ಭಾನುವಾರ ಮಂಗಳೂರಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಸೋಮಣ್ಣ, ಮನೆಯನು 6 ತಿಂಗಳ ಒಳಗೆ ನಿರ್ಮಿಸಬೇಕು. ಇಲ್ಲವಾದರೆ ಮತ್ತೆ ಸಮಸ್ಯೆ ಆಗುತ್ತದೆ. ಚೆಕ್, ಹಣಕಾಸಿಗಾಗಿ ಅಧಿಕಾರಿಗಳಿಗೆ ಎಡತಾಕಿ ಕಂಬ ಸುತ್ತುವ ಸಮಸ್ಯೆ ಆಗಬಾರದು. ನೈಜ ಫಲಾನುಭವಿಗೆ ಸೌಲಭ್ಯ ಲಭಿಸಬೇಕು ಎಂಬ ಕಾರಣಕ್ಕೆ ಫಲಾನುಭಾವಿ ಖಾತೆಗೆ ಜಿಪಿಎಸ್ ಅಳವಡಿಸಲಾಗಿದೆ ಎಂದು ಹೇಳಿದರು.
ಮನೆ ಮುಂದೆ ಫಲಾನುಭವಿ ಫೋಟೋ ತೆಗೆದು ಕಳುಹಿಸಬೇಕು. ಫಲಾನುಭವಿ ಹೆಬ್ಬೆಟ್ಟು ಒತ್ತಿದ ತಕ್ಷಣ ಕಂತಿನ ಹಣ ಮಂಜೂರಾಗುವ ಪಾರದರ್ಶಕ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಹೇಳಿದರು.
5 ವರ್ಷಗಳಲ್ಲಿ 8 ಲಕ್ಷ ಮನೆ ಮಾಡಿ ಮುಗಿಸುವ ಯೋಜನೆ ಇದೆ. ಬಾಕಿ ಉಳಿದಿರುವ 1.6 ಲಕ್ಷ ಮನೆ ಮಾ.31ರೊಳಗೆ ಮಾಡಿ ಮುಗಿಸಲಾಗುವುದು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement