ಮುಖ್ಯಮಂತ್ರಿ ಇಂದು ಮಂಗಳೂರಿಗೆ
ಮಂಗಳೂರು: ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮಾ.18ರಂದು ಮಂಗಳೂರಿಗೆ ಆಗಮಿಸಲಿದ್ದಾರೆ. ಬೆಳಗ್ಗೆ 9.45ಕ್ಕೆ ಬಜ್ಪೆ ವಿಮಾನ ನಿಲ್ದಾಣ ರಸ್ತೆಯ ಮೊದಲ ಹಂತದ ಕಾಮಗಾರಿ ಉದ್ಘಾಟಿಸುವರು. 10 ಗಂಟೆಗೆ ಲೇಡಿಗೋಷನ್ ಆಸ್ಪತ್ರೆ ಕಟ್ಟಡ ಶಂಕುಸ್ಥಾಪನೆ ಮತ್ತು ಸಾರ್ವಜನಿಕ ಸಭೆ, 11ಕ್ಕೆ ಉರ್ವಸ್ಟೋರ್ನಲ್ಲಿ ಜೈವಿಕ ಕಿರು ವಿದ್ಯುತ್ ಸ್ಥಾವರ ಉದ್ಘಾಟನೆ ಮತ್ತು ವಿವಿಧ ರಸ್ತೆ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸುವರು. 11.15ಕ್ಕೆ ಮಂಗಳಾ ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಟ್ರ್ಯಾಕ್ ಉದ್ಘಾಟನೆ, ಕ್ರೀಡಾ ಹಾಸ್ಟೆಲ್ ಉದ್ಘಾಟನೆ, ಪರಿಶಿಷ್ಟ ಜಾತಿ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯಕ್ಕೆ ಶಂಕುಸ್ಥಾಪನೆ, 12 ಗಂಟೆಗೆ ಪಿಲಿಕುಳದಲ್ಲಿ ಪ್ಲಾನೆಟೋರಿಯಂ ಶಂಕುಸ್ಥಾಪನೆ, ಗುತ್ತಿನ ಮನೆ ಉದ್ಘಾಟನೆ, 12.45ಕ್ಕೆ ರಾಷ್ಟ್ರೀಯ ಏರ್ಕಾರ್ಗೋ, ಕ್ಯೂಟ್ ಫೆಸಿಲಿಟಿ ಉದ್ಘಾಟನೆ ನೆರವೇರಿಸುವರು. 2 ಗಂಟೆಗೆ ಬೆಂಗಳೂರಿಗೆ ನಿರ್ಗಮಿಸುವರು.