ಸತ್ಯ, ವಸ್ತುನಿಷ್ಠ ವರದಿ: ಸುಧೀರ್ ಘಾಟೆ
ಮಂಗಳೂರು: ಮಾಧ್ಯಮಗಳಲ್ಲಿ ಪ್ರಕಟವಾಗುವ ವರದಿಗಳು ಸಮಾಜದ ಮೇಲೆ ಪ್ರಭಾವ ಬೀರುತ್ತದೆ. ಈ ನಿಟ್ಟಿನಲ್ಲಿ ಯಾವುದೇ ಸುದ್ದಿಗಳನು ಅತಿಯಾಗಿ ರಂಜಿಸದೆ ಸತ್ಯ ಹಾಗೂ ವಸ್ತುನಿಷ್ಠ ವರದಿಗಳನು ನೀಡುವ ಮಹತ್ತರ ಜವಾಬ್ದಾರಿ ಪತ್ರಕರ್ತರ ಮೇಲಿದೆ ಎಂದು ಮ್ಯಾಗಂ ಇಂಟರ್ ಗ್ರಾಫಿಕ್ಸ್ ಅಧ್ಯಕ್ಷ ಸುಧೀರ್ ಘಾಟೆ ಹೇಳಿದರು.
ದ.ಕ. ಕಾರ್ಯನಿರತ ಪತ್ರಕರ್ತರ ಸಂಘ, ಮಂಗಳೂರು ಪ್ರೆಸ್ಕ್ಲಬ್ ಮತ್ತು ಪತ್ರಿಕಾ ಭವನ ಟ್ರಸ್ಟ್ ಆಶ್ರಯದಲ್ಲಿ ಶನಿವಾರ ಮಲ್ಲಿಕಟ್ಟೆ ಲಯನ್ಸ್ ಸೇವಾ ಮಂದಿರದಲ್ಲಿ ನಡೆದ 'ಪ್ರೆಸ್ಕ್ಲಬ್ ದಿನಾಚರಣೆ' ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ವಿಜಯ ಪ್ರಕಾಶ್, ಜಿಲ್ಲೆಯ ಅಭಿವೃದ್ಧಿಯಲ್ಲಿ ಮಾಧ್ಯಮ ಕೊಡುಗೆ ಅಪಾರ. ಮಾಧ್ಯಮ ಕ್ಷೇತ್ರಕ್ಕೆ ತನದೇ ಗೌರವವಿದ್ದು ವಸ್ತು ನಿಷ್ಠ ವರದಿಗಳ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣ ಪತ್ರಕರ್ತರ ಧ್ಯೇಯವಾಗಿರಬೇಕು ಎಂದರು.
ಪತ್ರಕರ್ತರ ಕ್ರೀಡಾಕೂಟ ವಿಜೇತರಿಗೆ ಚಲನಚಿತ್ರ ನಟ ಅರ್ಜುನ ಕಾಪಿಕಾಡ್ ಬಹುಮಾನ ವಿತರಿಸಿದರು. ಹಿರಿಯ ಪತ್ರಕರ್ತ ಮನೋಹರ ಪ್ರಸಾದ್ ಶುಭ ಹಾರೈಸಿದರು. 2012ನೇ ಸಾಲಿನಲ್ಲಿ ವಿವಿಧ ಸಂಘ ಸಂಸ್ಥೆಗಳ ಪ್ರಶಸ್ತಿ ವಿಜೇತ ಪತ್ರಕರ್ತರನು ಹಾಗೂ ಛಾಯಾಗ್ರಾಹಕರನು ಸನ್ಮಾನಿಸಲಾಯಿತು.
ಸಂಘದ ಅಧ್ಯಕ್ಷ ಪಿ.ಬಿ.ಹರೀಶ್ ರೈ ಅಧ್ಯಕ್ಷತೆ ವಹಿಸಿದ್ದರು. ಪ್ರೆಸ್ಕ್ಲಬ್ ಅಧ್ಯಕ್ಷ ರಾಮಕೃಷ್ಣ, ಪ್ರಧಾನ ಕಾರ್ಯದರ್ಶಿ ಕಿರಣ್ ಸಿರ್ಸೀಕರ್, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರವೀಂದ್ರ ಶೆಟ್ಟಿ, ಪತ್ರಕರ್ತರ ಸಂಘ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ನಾಯಕ್ ಇಂದಾಜೆ, ಪತ್ರಕರ್ತ ನರೇಶ್ ಸಸಿಹಿತ್ಲು ಹಾಜರಿದ್ದರು. ಪತ್ರಕರ್ತರಿಂದ ವಿವಿಧ ಮನರಂಜನಾ ಕಾರ್ಯಕ್ರಮ ನಡೆಯಿತು.