ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಸ್ವಾಮೀಜಿ ಮೊಕ್ಕಾಂ ವೇಳೆ ಘರ್ಷಣೆ: ಆರೋಪಿಗಳ ಖುಲಾಸೆ

Mainashree
Updated On : 18 Mar 2013, 11:14 am

ಪುತ್ತೂರು: ಪುತ್ತೂರು ಪೇಟೆಯ ಹೊರವಲಯದ ಕರ್ಮಲ ಮಹಾಲಕ್ಷ್ಮೀ ದೇವಿ ಮಂದಿರದಲ್ಲಿ ಹನ್ನೊಂದು ವರ್ಷದ ಹಿಂದೆ ಕಾಶಿಮಠದ ಕಿರಿಯ ಸ್ವಾಮೀಜಿ ರಾಘವೇಂದ್ರ ತೀರ್ಥ ಅವರು ಮೊಕ್ಕಾಂ ಹೂಡಲೆಂದು ಬಂದಿದ್ದ ವೇಳೆ ನಡೆದಿದ್ದ ಪ್ರತಿಭಟನೆ, ಕಲ್ಲು ತೂರಾಟ, ಗುಂಪು ಘರ್ಷಣೆ ಪ್ರಕರಣಕ್ಕೆ ಸಂಬಂಧಿಸಿ ಆರೋಪ ಎದುರಿಸುತ್ತಿದ್ದ 78 ಮಂದಿ ಆರೋಪಿಗಳನ್ನು ಪುತ್ತೂರು ನ್ಯಾಯಾಲಯ ಶನಿವಾರ ಖುಲಾಸೆಗೊಳಿಸಿ ತೀರ್ಪು ನೀಡಿದೆ. 88 ಮಂದಿ ಆರೋಪಿಗಳ ಪೈಕಿ 9 ಮಂದಿ ಈಗಾಗಲೇ ಮೃತಪಟ್ಟಿದ್ದು, ಒಬ್ಬರ ಪ್ರಕರಣವನ್ನು ಪ್ರತ್ಯೇಕಿಸಲಾಗಿದೆ. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಉಳಿದ ಆರೋಪಿಗಳನ್ನು ದೋಷಮುಕ್ತಿಗೊಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement