ಅರಣ್ಯ ಇಲಾಖೆ ಆವರಣದಲ್ಲಿ ಯುವತಿ ಆತ್ಮಹತ್ಯೆ
ಮಂಗಳೂರು: ಕದ್ರಿ ಪಾರ್ಕ್ ಮುಂಭಾಗ ಅರಣ್ಯ ಇಲಾಖೆ ಆವರಣದೊಳಗೆ ಮರಕ್ಕೆ ಶಾಲ್ನಿಂದ ನೇಣು ಬಿಗಿದು ಪುತ್ತೂರಿನ ಪ್ರಮೀಳಾ (21) ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ. ಮಂಗಳವಾರ ಸಂಜೆ 5 ಗಂಟೆ ವೇಳೆಗೆ ಸಾರ್ವಜನಿಕರು ನೋಡಿ ಪೊಲೀಸರಿಗೆ ಮಾಹಿತಿ ನೀಡಿದರು.ಮಂಗಳವಾರ ಬೆಳಗ್ಗಿನ ಜಾವ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ. ಪ್ರೇಮ ವೈಫಲ್ಯ ಆತ್ಮಹತ್ಯೆಗೆ ಕಾರಣ ಇರಬಹುದು ಎಂದು ಶಂಕಿಸಲಾಗಿದೆ. ಮನೆಯವರಿಗೆ ಮಾಹಿತಿ ನೀಡಲಾಗಿದೆ.