ಪಿಂಚಣಿ ಮಂಜೂರಿಗೆ ಆಗ್ರಹ
ಬಂಟ್ವಾಳ: ಎ.ಪಿ.ಎಲ್, ಬಿ.ಪಿ.ಎಲ್ ಎಂಬ ಮಾನದಂಡಗಳಿಲ್ಲದೆ ಅರ್ಹ ಫಲಾನುಭವಿಗಳಿಗೆಲ್ಲರಿಗೂ ಕನಿಷ್ಠ 2000 ಪಿಂಚಣಿಯನ್ನು ಸರ್ಕಾರ ಮಂಜೂರು ಮಾಡಬೇಕೆಂದು ರಾಜ್ಯ ಪಿಂಚಣಿ ಪರಿಷತ್ನ ದ.ಕ. ಜಿಲ್ಲಾ ನಿರ್ವಾಹಕಿ, ಸಮಗ್ರ ಗ್ರಾಮೀಣ ಆಶ್ರಮದ ಕಾರ್ಯಕರ್ತೆ ಪದ್ಮ ಆಗ್ರಹಿಸಿದ್ದಾರೆ.
ಸಾಮಾಜಿಕ ಭದ್ರತೆಯ ಭಾಗವಾದ ಪಿಂಚಣಿಯ ಸಾರ್ವತ್ರೀಕರಣಕ್ಕೆ ರಾಷ್ಟ್ರದ್ಯಾಂತ ಹೋರಾಟ ನಡೆಯುತ್ತಿದ್ದು, ಕೇಂದ್ರ ಸರ್ಕಾರ ಈಗಾಗಲೇ ಪಿಂಚಣಿ ಪರಿಷತ್ ಜತೆ ಮಾತುಕತೆ ನಡೆಸಿ ಒಪ್ಪಿಕೊಂಡಿರುವ ಅಂಶಗಳನ್ನು ತಕ್ಷಣ ಜಾರಿಗೊಳಿಸುವಂತೆ ಅವರು ಒತ್ತಾಯಿಸಿದ್ದು, ಸಾಮಾಜಿಕ ನ್ಯಾಯದ ಈ ಜನಾಂದೋಲನಕ್ಕೆ ಜನಪರ ಸಂಘಟನೆಗಳು ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ.