ಜೆಡಿಎಸ್ ಸಾಮೂಹಿಕ ರಾಜಿನಾಮೆ ರದ್ದು!
ಮಂಗಳೂರು: ಜೆಡಿಎಸ್ ಆತ್ಮಾವಲೋಕನ ಸಭೆಯಲ್ಲಿ ಗದ್ದಲ ಎಬ್ಬಿಸಿದ ಇಬ್ಬರು ನಾಯಕರನ್ನು ಉಚ್ಚಾಟನೆ ನಡೆಸಿದ ಬಳಿಕ ಜಿಲ್ಲಾ ಜೆಡಿಎಸ್ ಸಾಮೂಹಿಕ ರಾಜಿನಾಮೆ ಬೆದರಿಕೆ ಹಿನ್ನೆಲೆಯಲ್ಲಿ ಸದ್ಯಕ್ಕೆ ಉಚ್ಚಾಟನೆ ಹಿಂದೆಗೆದುಕೊಳ್ಳಲಾಗಿದೆ.
ಜೆಡಿಎಸ್ ಅಲ್ಪಸಂಖ್ಯಾತ ಘಟಕ ಅಧ್ಯಕ್ಷ ಎಂ.ಡಿ.ಅಸ್ಲಂ ಮತ್ತು ಕಾರ್ಯದರ್ಶಿ ಶಶಿರಾಜ್ ಶೆಟ್ಟಿಯನ್ನು ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಉಚ್ಚಾಟಿಸಿದ್ದರು. ಇದನ್ನು ವಿರೋಧಿಸಿ ಜೆಡಿಎಸ್ ಮುಖಂಡರಾದ ಎಂ.ಜಿ.ಹೆಗಡೆ, ನಾಗರಾಜ ಶೆಟ್ಟಿ, ಸದಾನಂದ ಶೆಟ್ಟಿ, ಅಬೂಬಕರ್ ನಾಟೆಕಲ್ ಸಹಿತಿ ಅನೇಕ ಮಂದಿ ರಾಜೀನಾಮೆಗೆ ಮುಂದಾಗಿದ್ದರು. ಪಕ್ಷದ ಕಚೇರಿಗೆ ಮುತ್ತಿಗೆ ಕಾರ್ಯಕ್ರಮ, ಶಶಿರಾಜ್ ಶೆಟ್ಟಿ ಅವರು ತಲೆಬೋಳಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಸದ್ಯಕ್ಕೆ ಉಚ್ಚಾಟನೆ ಹಿಂದೆಗೆದುಕೊಂಡ ಕಾರಣ ಉರಿಯುತ್ತಿರುವ ಬೆಂಕಿ ತಾತ್ಕಾಲಿಕ ಶಮನವಾಗಿದೆ. ಶಶಿರಾಜ್ ಶೆಟ್ಟಿ ಅವರನ್ನು ಹಿಂದೊಮ್ಮೆ ಉಚ್ಚಾಟಿಸಿ, ಆದೇಶ ವಾಪಸ್ ತೆಗೆದುಕೊಳ್ಳಲಾಗಿತ್ತು. ಇದೀಗ ಎರಡನೇ ಬಾರಿಗೆ ಅವಕಾಶ ಲಭಿಸಿದೆ.