ಭಜನಾ ಮಂಡಳಿ ಒಕ್ಕೂಟ ಅಸ್ತಿತ್ವಕ್ಕೆ
ಉಡುಪಿ: ತಾಲೂಕಿನಾದ್ಯಂತ ಪಸರಿಸಿರುವ ಭಜನಾ ಮಂಡಳಿಗಳನ್ನು ಸಂಘಟಿಸಿ ಭಜನೆಗೆ ಪ್ರೋತ್ಸಾಹ ನೀಡುವುದು, ಭಜನಾ ಮಂಡಳಿಗಳನ್ನು ಸದೃಢಗೊಳಿಸುವುದು, ಯುವ ಪೀಳಿಗೆಗೆ ಭಜನೆಯ ಬಗ್ಗೆ ಅಭಿರುಚಿ ಮೂಡಿಸುವುದು ಮುಂತಾದ ಧ್ಯೇಯಗಳೊಂದಿಗೆ ಉಡುಪಿ ತಾಲೂಕು ಭಜನಾ ಮಂಡಳಿಗಳ ಒಕ್ಕೂಟ ಅಸ್ತಿತ್ವಕ್ಕೆ ಬಂದಿದೆ.
ಮಾ. 24ರಂದು ಕೃಷ್ಣ ಮಠದ ರಾಜಾಂಗಣದಲ್ಲಿ ಒಕ್ಕೂಟದ ಗೌರವಾಧ್ಯಕ್ಷ ನಾಡೋಜ ಡಾ.ಜಿ. ಶಂಕರ್ ಅಧ್ಯಕ್ಷತೆಯಲ್ಲಿ ಒಕ್ಕೂಟವನ್ನು ಪರ್ಯಾಯ ಸೋದೆ ಮಠದ ಶ್ರೀವಿಶ್ವವಲ್ಲಭ ತೀರ್ಥರು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಕೆ. ರಘುಪತಿ ಭಟ್, ಉದ್ಯಮಿ ಪ್ರಮೋದ್ ಮಧ್ವರಾಜ್, ಜಾನಪದ ಸಂಶೋಧಕ ಕೆ.ಎಲ್. ಕುಂಡಂತಾಯ ಭಾಗವಹಿಸಲಿದ್ದು, ಒಕ್ಕೂಟದ ಸಲಹೆಗಾರರಾದ ಎರ್ಮಾಳು ಶಶಿಧರ ಶೆಟ್ಟಿ, ಭುವನೇಂದ್ರ ಕಿದಿಯೂರು, ತೋಟದ ಮನೆ ದಿವಾಕರ ಶೆಟ್ಟಿ ಮತ್ತು ಕಟಪಾಡಿ ಶಂಕರ ಪೂಜಾರಿ ಉಪಸ್ಥಿತರಿರುವರು.