ಯುವತಿ ಅತ್ಮಹತ್ಯೆ ಅಲ್ಲ ಕೊಲೆ:ಹೆತ್ತವರ ಆರೋಪ
ಮಂಗಳೂರು: ಕದ್ರಿ ಪಾರ್ಕ್ ಬಳಿ ಯುವತಿಯನ್ನು ಕೊಲೆ ಮಾಡಿ ನೇಣಿಗೆ ಹಾಕಲಾಗಿದೆ ಎಂದು ಯುವತಿ ಹೆತ್ತವರು ಆರೋಪಿಸಿದ್ದಾರೆ.
ಪ್ರಮೀಳಾ ತಂದೆ ಅಮ್ಮು ಪೂಜಾರಿ ಹೇಳುವಂತೆ ಆಕೆ ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಥಿತಿಯವಳಲ್ಲ. ಮಾ.21ರಂದು ನಮ್ಮ ಸಂಬಂಧಿಕರ ಮದುವೆ ಇದ್ದು ಅದಕ್ಕೆ ಬರುತ್ತೇನೆ ಎಂದು ಹೇಳಿದ್ದಳು. ಕದ್ರಿ ಹಾಸ್ಟೆಲ್‌ನಲ್ಲಿದ್ದು ಕೆಲಸ ಮಾಡಿಕೊಂಡು ಕಂಪ್ಯೂಟರ್ ಕ್ಲಾಸ್‌ಗೆ ಹೋಗುತ್ತಿದ್ದಳು. ಆಕೆಯ ಭುಜದಲ್ಲಿ ಗಾಯದ ಗುರುತಿದೆ. ಇದು ಕೊಲೆಗೆ ಸಾಕ್ಷಿ ಎನ್ನುತ್ತಾರೆ. ಆತ್ಮಹತ್ಯೆ ಮಾಡಿಕೊಳ್ಳುವಾಗ ಮರದ ಟೊಂಗೆಗಳು ತಾಗಿ ಗಾಯವಾಗಿರಬಹುದು ಎನ್ನುವುದು ಕದ್ರಿ ಪೊಲೀಸರ ಅಭಿಪ್ರಾಯ. ಆದರೆ ಅದು ಉಗುರಿನ ಗೀರಿದ ಗಾಯಗಳು ಎನ್ನುವುದು ತಂದೆ ಅಮ್ಮು ಪೂಜಾರಿ ವಾದ.
ಯುವತಿಯ ಕಂಪ್ಯೂರ್ ಶಿಕ್ಷಕರು ಹೇಳುವಂತೆ ಪ್ರಮೀಳಾ ಕೆಲಸದಲ್ಲಿ ಶ್ರದ್ಧೆ ಹೊಂದಿದ್ದಳು. ಶಿಸ್ತಿನಿಂದ ಕೆಲಸ ಮಾಡುತ್ತಿದ್ದಳು. ಎಲ್ಲರೊಂದಿಗೂ ಬೆರೆಯುತ್ತಿದ್ದಳು. ಮಾ.18ರಂದು ಬೆಳಗ್ಗೆ 7.15ಕ್ಕೆ ತರಗತಿಗೆ ಬಂದು ಹೋಗಿದ್ದಾಳೆ. ಮಂಗಳವಾರ ತರಗತಿಗೆ ಬಂದಿರಲಿಲ್ಲ. ಶವದ ಮರಣೋತ್ತರ ಪರೀಕ್ಷೆ ನಡೆದಿದ್ದು, ವರದಿ ಇನ್ನಷ್ಟೇ ಪೊಲೀಸರ ಕೈ ಸೇರಬೇಕಿದೆ. ಬಳಿಕ ಆತ್ಮಹತ್ಯೆಯೊ, ಕೊಲೆಯೋ ನಿರ್ಧಾರವಾಗಲಿದೆ.