10 ಲಕ್ಷ ಕೊಟ್ಟರೆ ಡೈವೋರ್ಸ್ ನೀಡುವೆ ಎಂದ ಪತಿ ವಿರುದ್ಧ ಪತ್ನಿ ದೂರು
ಮಂಗಳೂರು: ಹತ್ತು ಲಕ್ಷ ನೀಡಿದರೆ ಡೈವೋರ್ಸ್ ನೀಡುವುದಾಗಿ ಬೆದರಿಸಿದ ಪತಿ ವಿರುದ್ಧ ಹೊಯ್ಗೆಬಜಾರ್ ಧೂಮಾವತಿ ಕಂಪೌಂಡು ನಿವಾಸಿ ನೀತಾ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಆರೋಪಿ ಪತಿ ಮಹೇಶ್ ಸಂಬಂಧಿಕರಾದ ಮನೋಜ್, ದೀಪಾ, ಸೋಮನ್, ಆನಂದ ವಿರುದ್ಧ ದೂರು ದಾಖಲಾಗಿದೆ. 2012 ರ ಮೇ 3ರಂದು ಮದುವೆಯಾಗಿದ್ದರು. ಆಗ 30 ಪವನ್ ಚಿನ್ನಾಭರಣ ಮತ್ತು 30 ಸಾವಿರ ಬೆಲೆ ಬಾಳುವ ಸೊತ್ತು, ಮದುವೆ ಖರ್ಚು ನೀಡಿದ್ದರು. ಈಗ ಚಿನ್ನಾಭರಣವನ್ನು ಕಸಿದುಕೊಂಡಿದ್ದಾರೆ. ಸದಾ ಸಂಶಯ ಪಡುವ ಪತಿ, ಹೊಡೆದು ಹಲ್ಲೆ ಮಾಡುತ್ತಾನೆ. ಮನೆಯವರೆಲ್ಲರೂ ಸೇರಿ ಹುಚ್ಚಿ ಎಂದು ನಿಂದಿಸುತ್ತಾರೆ ಎಂದು ನೀತಾ ದೂರು ನೀಡಿದ್ದಾರೆ.
ಮಲಗಿದ್ದಲ್ಲೇ ವ್ಯಕ್ತಿ ಸಾವು
ಸುಳ್ಯ: ಕಲ್ಲುಗುಂಡಿಯ ಪೇಟೆಯಲ್ಲಿ ವ್ಯಕ್ತಿಯೋರ್ವರು ಅಸಹಜವಾಗಿ ಸಾವನ್ನಪ್ಪಿದ್ದಾರೆ. ರಸ್ತೆ ಬದಿ ಮಲಗಿದ್ದ ಕುಂಜಿರ(38) ಎಂಬ ವ್ಯಕ್ತಿಯು ಅಲ್ಲೇ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ.