10 ಲಕ್ಷ ಕೊಟ್ಟರೆ ಡೈವೋರ್ಸ್: ಪತ್ನಿ ದೂರು
ಕ.ಪ್ರ.ವಾರ್ತೆ ಮಂಗಳೂರು ಮಾ.22
ಮಂಗಳೂರು: 10ಲಕ್ಷ ನೀಡಿದರೆ ಮಾತ್ರ ಡೈವೋರ್ಸ್ ನೀಡುವುದಾಗಿ ಬೆದರಿಸಿದ ಪತಿ ವಿರುದ್ಧ ಹೊಯ್ಗೆಬಜಾರ್ ಧೂಮಾವತಿ ಕಾಂಪೌಂಡ್ ನಿವಾಸಿ ನೀತಾ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಆರೋಪಿ ಪತಿ ಮಹೇಶ್ ಹಾಗೂ ಸಂಬಂಧಿಕರಾದ ಮನೋಜ್, ದೀಪಾ, ಸೋಮನ್, ಆನಂದ ವಿರುದ್ಧ ದೂರು ದಾಖಲಾಗಿದೆ. 2012ರ ಮೇ 3ರಂದು ಮದುವೆಯಾಗಿದ್ದರು. ಆಗ 30 ಪವನ್ ಚಿನ್ನಾಭರಣ ಮತ್ತು 30 ಸಾವಿರ ಬೆಲೆ ಬಾಳುವ ಸ್ವತ್ತು, ಮದುವೆ ಖರ್ಚು ನೀಡಿದ್ದರು. ಈಗ ಚಿನ್ನಾಭರಣವನ್ನು ಕಸಿದುಕೊಂಡಿದ್ದಾರೆ. ಸದಾ ಸಂಶಯ ಪಡುವ ಪತಿ ಹೊಡೆದು ಹಲ್ಲೆ ಮಾಡುತ್ತಾನೆ. ಮನೆಯವರೆಲ್ಲರೂ ಸೇರಿ ಹುಚ್ಚಿ ಎಂದು ನಿಂದಿಸುತ್ತಾರೆ. ಹೀಗಾಗಿ ವಿಚ್ಛೇದನ ಕೇಳಿದರೆ ದುಡ್ಡು ಕೊಟ್ಟರೆ ಮಾತ್ರ ಡೈವೋರ್ಸ್ ನೀಡುವುದಾಗಿ ಹೆದರಿಸುತ್ತಿದ್ದಾರೆ ಎಂದು ನೀತಾ ದೂರು ನೀಡಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.