ಅಂಗಡಿ ಮಾರಾಟ ಮಾಡಿ, ಪತ್ನಿ ಬಿಟ್ಟೋಡಿದ ಪತಿ
ಮಂಗಳೂರು: ಕಾಟಿಪಳ್ಳದಲ್ಲಿ ಸೆಲೂನ್ ಮಾಡಿಕೊಂಡಿದ್ದ ಗಂಡ ಶ್ರೀನಿವಾಸ ಆಸ್ತಿ ಮಾರಾಟ ಮಾಡಿ ನಾಪತ್ತೆಯಾಗಿರುವ ಬಗ್ಗೆ ಪತ್ನಿ ಸುರತ್ಕಲ್ ಪೊಲೀಸರಿಗೆ ದೂರು ನೀಡಿದ್ದಾರೆ.
ಮಾ.16ರಂದು ಬೆಳಗ್ಗೆ 7 ಗಂಟೆಗೆ ಕಾಟಿಪಳ್ಳದ ಸೆಲೂನ್‌ಗೆ ಹೋಗುತ್ತೇನೆ ಎಂದು ಹೋದವರು ಮನೆಗೆ ಬಂದಿಲ್ಲ. ಅವರ ಮೊಬೈಲ್‌ಗೆ ಕರೆ ಮಾಡಿದರೆ ಸ್ವಿಚ್ಡ್ ಆಫ್ ಆಗಿದೆ.
ಅವರ ಊರಾದ ಹೈದರಾಬಾದ್‌ಗೆ ಕರೆ ಮಾಡಿ ವಿಚಾರಿಸಿದರೂ ಪತ್ತೆಯಾಗಿಲ್ಲ. ಕಾಟಿಪಳ್ಳದ ಎರಡೂ ಅಂಗಡಿಗಳನ್ನು ಮಾರಾಟ ಮಾಡಿದ್ದು, ಸೆಲೂನ್ ಸಾಮಾಗ್ರಿಗಳಾದ ಕತ್ತರಿ, ಟಿಶ್ಯು ಪೇಪರ್ ಮೊದಲಾದ ಸಾಮಗ್ರಿಗಳನ್ನು ಚೀಲದಲ್ಲಿ ಹಾಕಿಕೊಂಡು ಎಲ್ಲಿಗೊ ಹೋಗಿದ್ದಾರೆ. ಅವರನ್ನು ಪತ್ತೆ ಮಾಡಿ ಕೊಡಿ ಎಂದು ಪುಷ್ಪ (32) ಸುರತ್ಕಲ್ ಪೊಲೀಸರಿಗೆ ದೂರು ನೀಡಿದ್ದಾರೆ.
ದಂಪತಿ ಕಾಟಿಪಳ್ಳದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.