ಪೆಟ್ರೋಲ್ ಬಂಕ್ ಪಕ್ಕ ಬೆಂಕಿ; ತಪ್ಪಿದ ಅನಾಹುತ
ವಿಟ್ಲ: ಗುರುವಾರ ರಾತ್ರಿ ಕಾಸರಗೋಡು ರಸ್ತೆಯಲ್ಲಿರುವ ಪೆಟ್ರೋಲ್ ಬಂಕ್ ಮುಂಭಾಗದ ಚರಂಡಿಗೆ ಮಾನಸಿಕ ಅಸ್ವಸ್ಥ ವ್ಯಕ್ತಿಯೊಬ್ಬರು ಬೆಂಕಿ ಹಾಕಿದ್ದು ಬಾರಿ ದೊಡ್ಡ ಅನಾಹುತ ತಪ್ಪಿದ ಘಟನೆ ನಡೆದಿದೆ. ವಿಟ್ಲದ ನಾಯಕ್ಸ್ ಪೆಟ್ರೋಲ್ ಬಂಕ್ ಮುಂಭಾಗದಲ್ಲಿರುವ ಚರಂಡಿಯಲ್ಲಿ ಕಸ ವ್ಯಾಪಕವಾಗಿ ತುಂಬಿದ್ದು, ಕಸ ಕಂಡರೆ ಬೆಂಕಿ ಹಾಕುವ ಮಾನಸಿಕವಾಗಿ ಸರಿಯಿಲ್ಲ ವ್ಯಕ್ತಿಯೊಬ್ಬರು ಆ ಪ್ರದೇಶಕ್ಕೆ ಬೆಂಕಿ ಹಾಕಿದ್ದಾರೆ. ಬಿಸಿಲಿನ ಬೇಗೆಗೆ ಒಣಗಿದ್ದ ಕಸ ಒಮ್ಮಿಂದೊಮ್ಮೆಲೇ ಬೆಂಕಿ ವ್ಯಾಪಕವಾಗಿ ಹರಡಿದ್ದು ಸ್ಥಳದಲ್ಲಿದ್ದ ಸಾರ್ವಜನಿಕರು ಬೆಂಕಿ ನಂದಿಸಿದ್ದಾರೆ ಇದರಿಂದ ಪೆಟ್ರೋಲ್ ಬಂಕ್ ಸ್ವಲ್ಪದರಲ್ಲೇ ಪಾರಗಿದೆ. ಇಲ್ಲವಾದಲ್ಲಿ ಪೆಟ್ರೋಲ್ ಬಂಕ್ ಸೇರಿ ಅಲ್ಲಿ ನಿಲ್ಲಿಸಿಲಾಗುವ ಬಸ್ಸುಗಳು ಅಪಾಯಕ್ಕೆ ಒಳಗಾಗುತ್ತಿತ್ತು ಮತ್ತು ವಿಟ್ಲದಲ್ಲಿ ಇಲ್ಲಿಯವರೆಗೆ ನಡೆಯದ ಬಾರಿ ಅವಘಡ ಸಂಭವಿಸುತ್ತಿತ್ತು.