ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಬಸ್ಸು-ಸ್ಕೂಟರ್ ಡಿಕ್ಕಿ: ವ್ಯಕ್ತಿ ಸಾವು

Mainashree
Updated On : 23 Mar 2013, 11:24 am

ಪುತ್ತೂರು:  ಸಾರಿಗೆ ಸಂಸ್ಥೆ ಬಸ್ ಮತ್ತು ಹೋಂಡಾ ಆಕ್ಟಿವಾ ದ್ವಿಚಕ್ರ ವಾಹನದ ನಡುವೆ ಡಿಕ್ಕಿ ಸಂಭವಿಸಿ ಆಕ್ಟಿವಾ ಸವಾರ ಸಾವಿಗೀಡಾದ ಘಟನೆ ಗುರುವಾರ ಪುತ್ತೂರು- ಸುಬ್ರಹ್ಮಣ್ಯ ರಸ್ತೆಯ ನರಿಮೊಗರು ಎಂಬಲ್ಲಿ ನಡೆದಿದೆ. ಹಣ್ಣು ಅಡಿಕೆ ವ್ಯಾಪಾರಿ ಮಾಂತೂರು ಹೊಸಮನೆ ನಿವಾಸಿ ಇಬ್ರಾಹಿಂ(55) ಮೃತಪಟ್ಟವರು. ಕಾಣಿಯೂರಿನಿಂದ ಪುತ್ತೂರು ಕಡೆಗೆ ಸಾಗುತ್ತಿದ್ದ ಸಾರಿಗೆ ಸಂಸ್ಥೆ ಬಸ್ ಮತ್ತು ಸವಣೂರಿನಿಂದ ಕಾಣಿಯೂರು ಕಡೆಗೆ ಚಲಿಸುತ್ತಿದ್ದ ಹೋಂಡಾ ಆಕ್ಟಿವಾ ನಡುವೆ ನರಿಮೊಗರು ಜೈನರ ಪೇಟೆಯಲ್ಲಿ ಅಪಘಾತ ಸಂಭವಿಸಿದೆ. ತೀವ್ರ ಗಾಯಗೊಂಡ ಇಬ್ರಾಹಿಂ ಅವರನ್ನು ಪುತ್ತೂರು ಮಹಾವೀರ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟಿದ್ದಾರೆ. ಅಬ್ದುಲ್ ಖಾದರ್ ಎಂಬವರು ನೀಡಿದ ದೂರಿನ ಮೇರೆಗೆ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement