1.33 ಸೆಂಟ್ಸ್ನಲ್ಲಿ ಮನೆ ನಿರ್ಮಿಸಬಹುದು: ಮುಡಾ
ಮಂಗಳೂರು: ನಗರದಲ್ಲಿ 3 ಸೆಂಟ್ಸ್ ಜಾಗದಲ್ಲಿ ಮನೆ ಕಟ್ಟಲು ಸಾಧ್ಯವಿಲ್ಲ ಎನ್ನುವುದು ಕಾಂಗ್ರೆಸ್ ಮತಗಳಿಗೆಕೆ ಮಾಡಿದ ಅಪಪ್ರಚಾರ. 1.33 ಸೆಂಟ್ಸ್ ಜಾಗದಲ್ಲಿಯೂ ಮನೆ ಕಟ್ಟಬಹುದು ಎಂದು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ರಮೇಶ್ ಎಸ್. ಸ್ಪಷ್ಟಪಡಿಸಿದ್ದಾರೆ.
ಅಸಲಿಗೆ ಕಾಂಗ್ರೆಸ್ 2005-06ರಲ್ಲಿ ನಿಯಮ ತಿದ್ದುಪಡಿ ಮಾಡಿ ಜಾಗದ ಮೌಲ್ಯದ ಶೇ.15 ಶುಲ್ಕವಾಗಿ ಪಾವತಿಸುವಂತೆ ಮಾಡಿತು. ಪರಿಣಾಮ3 ಸೆಂಟ್ಸ್ ಜಾಗದವರು 50 ಸಾವಿರ ಹೆಚ್ಚುವರಿ ಶುಲ್ಕ ಪಾವತಿಸುವಂತಾಯಿತು. ಇದರಿಂದ ಬಡಜನರಿಗೆ ಅನ್ಯಾಯವಾಗಿತ್ತು. ಬಿಜೆಪಿ ಸರ್ಕಾರ ಬಂದ ಬಳಿಕ 3 ಸೆಂಟ್ಸ್ವರೆಗೆ ಶುಲ್ಕವನ್ನೇ ಮನ್ನಾ ಮಾಡಿದೆ. 6 ಸೆಂಟ್ಸ್ ಜಾಗಕ್ಕೆ ಶೇ.50, 12 ಸೆಂಟ್ಸ್ ಜಾಗಕ್ಕೆ ಹಿಂದಿನ ಶುಲ್ಕಕ್ಕಿಂತ ಶೇ.25 ಶುಲ್ಕ ಕಡಿಮೆ ಮಾಡಿದೆ ಎಂದು ರಮೇಶ್ ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
15 ತಿಂಗಳ ಅವಧಿಯಲ್ಲಿ ಪ್ರಾಧಿಕಾರ 3,124 ಎಕನಿವೇಶನ ವಿನ್ಯಾಸ ಅನುಮೋದನೆ ನೀಡಿದೆ. ಇಧರಲ್ಲಿ 3ರಿಂದ 5 ಸೆಂಟ್ಸ್ ಜಾಗದ ಅರ್ಜಿಗಳು ಶೇ.60. ಆದರೆ ಸ್ಥಳೀಯ ಚುನಾವಣೆ ಸಂದರ್ಭ ಕಾಂಗ್ರೆಸ್ ಸುಳ್ಳು ಜಾಹೀರಾತು ನೀಡಿ 3ರಿಂದ 5 ಸೆಂಟ್ಸ್ ಜಾಗದಲ್ಲಿ ಮನೆ ಕಟ್ಟಲು ಅಸಾಧ್ಯ ಎಂದು ಅಪಪ್ರಚಾರ ಮಾಡಿದೆ. ಯಾವುದೇ ಕಾಂಗ್ರೆಸ್ ಮುಖಂಡರು ಸಂವಾದಕ್ಕೆ ಬರಲಿ. ನಾವು ಬಹಿರಂಗ ಚರ್ಚೆಗೆ ಸಿದ್ಧರಿದ್ದೇವೆ ಎಂದು ಸವಾಲು ಹಾಕಿದರು.
1.33 ಸೆಂಟ್ಸ್ ಜಾಗದಲ್ಲಿ 3 ಅಡಿ ರಸ್ತೆ ಇದ್ದರೂ ಮನೆ ಕಟ್ಟಲು ಅವಕಾಶ ಇದೆ. ಈ ಬಗ್ಗೆ ಏನಾದರೂ ಗೊಂದಲ ಇದ್ದರೆ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರು ಅಥವಾ ಸದಸ್ಯರನ್ನು ಸಂಪರ್ಕಿಸಬಹುದು. ಇದಲ್ಲಿ ಶಾಸಕರು, ವಿಧಾನಪರಿಷತ್ ಸದಸ್ಯರು ಇದ್ದಾರೆ. ಸುಳ್ಳು ಹೇಳುವರಲ್ಲ, ನಾವು ಹೇಳಿದ ಎಲ್ಲ ಅಂಶಗಳು ಪ್ರಾಧಿಕಾರದ ಜವಾಬ್ದಾರಿ ನಡಾವಳಿಗಳು ಎಂದರು.
ಶಾಸಕ ಎನ್.ಯೋಗೀಶ್ ಭಟ್, ವಿಧಾನಪರಿಷತ್ ಸದಸ್ಯ ಮೋನಪ್ಪ ಭಂಡಾರಿ, ರಾಜಗೋಪಾಲ ರೈ ಇದ್ದರು.
1.33 ಸೆಂಟ್ಸ್ ಜಾಗದಲ್ಲಿ 3 ಅಡಿ ರಸ್ತೆ ಇದ್ದರೂ ಮನೆ ಕಟ್ಟಲು ಅವಕಾಶ ಇದೆ. ಈ ಬಗ್ಗೆ ಏನಾದರೂ ಗೊಂದಲ ಇದ್ದರೆ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರು ಅಥವಾ ಸದಸ್ಯರನ್ನು ಸಂಪರ್ಕಿಸಬಹುದು. ಇದಲ್ಲಿ ಶಾಸಕರು, ವಿಧಾನಪರಿಷತ್ ಸದಸ್ಯರು ಇದ್ದಾರೆ.
- ರಮೇಶ್ ಎಸ್., ಅಧ್ಯಕ್ಷ, ನಗರಾಭಿವೃದ್ಧಿ ಪ್ರಾಧಿಕಾರ