ಬಡಗಎಡಪದವು: ಇಂದು ಆರೋಗ್ಯ ಉಚಿತ ತಪಾಸಣೆ,ಗುಂಪು ವಿಮೆ ಸೌಲಭ್ಯ
ಮಂಗಳೂರು: ಬಡಗಎಡಪದವು ಶ್ರೀ ಭೂತನಾಥೇಶ್ವರ ದೇವಸ್ಥಾನದಲ್ಲಿ ಎಜೆಆಸ್ಪತ್ರೆ ಸಹಯೋಗದೊಂದಿಗೆ ಭಾನುವಾರ ಆರೋಗ್ಯ ಉಚಿತ ತಪಾಸಣೆ, ಚಿಕಿತ್ಸೆ ನಡೆಯಲಿದೆ. ಬೆಳಗ್ಗೆ 9ರಿಂದ ಮಧ್ಯಾಹ್ನ 1 ಗಂಟೆ ವರೆಗೆ ತಪಾಸಣೆ ನಡೆಯಲಿದೆ. ಮಹಿಳೆ, ಮಕ್ಕಳ ತಜ್ಞರು ಭಾಗವಹಿಸುವರು. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದವರಿಗೆ ಆಸ್ಪತ್ರೆಯಲ್ಲಿ ನೀಡಲಾಗುವುದು ಎಂದು ವಿಜಯನಾಥ ವಿಠಲ ಶೆಟ್ಟಿ ಹೇಳಿದರು. ಗುಂಪು ವಿಮೆ ಮಾಡಲು ಅವಕಾಶ ಇದೆ. ರು. 100 ಪಾವತಿಸಿದರೆ ವರ್ಷದ ಅವಧಿಯಲ್ಲಿ 30 ಸಾವಿರ ಮೌಲ್ಯದ ವಿಮಾ ಸೌಲಭ್ಯ ಪಡೆಯಬಹುದು. ಸಾವು ಸಂಭವಿಸಿದರೆ 75 ಸಾವಿರ ಲಭಿಸಲಿದೆ. ಬಡತನರೇಖೆಗಿಂತ ಕೆಳಗಿನವರು ಅರ್ಹರು. ಎ.ಜೆ. ಆಸ್ಪತ್ರೆಯ ಭಾಸ್ಕರ ಅರಸ್ ಇದ್ದರು.