ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಬೆಳ್ತಂಗಡಿಗೆ ಟಿಕೆಟ್ ಕೊಡಿ: ಲೋಕೇಶ್ವರಿ ವಿನಯಚಂದ್ರ

Mainashree
Updated On : 24 Mar 2013, 12:05 pm

ಮಂಗಳೂರು: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆಗೆ ಟಿಕೆಟ್ ನೀಡುವಂತೆ ಸುಳ್ಯದ ಲೋಕೇಶ್ವರಿ ವಿನಯಚಂದ್ರ ಕೆಪಿಸಿಸಿ ಅಧ್ಯಕ್ಷರನ್ನು ಮನವಿ ಮಾಡಿದ್ದಾರೆ. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕೀಯವಾಗಿ ಗೌಡ ಸಮಾಜಕ್ಕೆ ಕಾಂಗ್ರೆಸ್ ಪ್ರಾಶಸ್ತ್ಯ ನೀಡಿಲ್ಲ. ಹಾಗಾಗಿಯೇ ಸುಳ್ಯ, ಪುತ್ತೂರು, ಬೆಳ್ತಂಗಡಿ, ಬಂಟ್ವಾಳಗಳಲ್ಲಿ ಗೌಡ ಸಮಾಜ ಬೇರೆ ರಾಜಕೀಯ ಪಕ್ಷಗಳತ್ತ ವಾಲಿದೆ. ಜಿಲ್ಲೆಯಲ್ಲಿ ಕೂಜುಗೋಡು ವೆಂಕಟ್ರಮಣ ಗೌಡ, ಕೂಜುಗೋಡು ಸುಬ್ರಹ್ಮಣ್ಯ ಗೌಡ ಬಿಟ್ಟರೆ ಕಾಂಗ್ರೆಸ್‌ನಲ್ಲಿ ಬೇರೆ ಯಾರೂ ಗೌಡ ಸಮಾಜದವರು ಶಾಸಕರಾಗಿಲ್ಲ. 1985ರಲ್ಲಿ ಕಾಂಗ್ರೆಸ್‌ನಿಂದ ತನಗೆ ಸ್ಪರ್ಧಿಸುವ ಅವಕಾಶ ಸಿಕ್ಕಿದರೂ ಪಕ್ಷದೊಳಗಿನ ಪಿತೂರಿಯಿಂದ 6 ಸಾವಿರ ಮತ ಅಂತರದಲ್ಲಿ ಸೋಲಬೇಕಾಯಿತು. 1983ರಲ್ಲಿ ಕಾಂಗ್ರೆಸ್ 15 ಸಾವಿರ ಮತ ಅಂತರದಿಂದ ಸೋತಿದೆ. ಬೆಳ್ತಂಗಡಿಯಲ್ಲಿ ಗೌಡ ಸಮಾಜದ 45 ಸಾವಿರ ಮತದಾರರಿದ್ದು, ತನಗೆ ಸ್ಪರ್ಧಿಸಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದರು. ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಸದಸ್ಯ ಶಿವಯ್ಯ ಗೌಡ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement