ಮೃದಂಗ ಚಕ್ರವರ್ತಿ ಹರಿಶ್ಚಂದ್ರನ್ ಇನ್ನಿಲ್ಲ
ಮಂಗಳೂರು: ಮೃದಂಗ ಚಕ್ರವರ್ತಿ, ಕರ್ನಾಟಕ ಕಲಾಶ್ರೀ ಪುರಸ್ಕೃತ ಕುಂಜೂರು ಹರಿಶ್ಚಂದ್ರನ್ (81) ಅಸೌಖ್ಯದಿಂದ ಶುಕ್ರವಾರ ರಾತ್ರಿ ನಿಧನರಾದರು. ಮೃತರು ಪತ್ನಿ, ಪುತ್ರ ರವಿ ಕುಮಾರ್ ಹಾಗೂ ಒಬ್ಬ ಪುತ್ರಿಯನ್ನು ಅಗಲಿದ್ದಾರೆ. 15 ವರ್ಷಗಳ ಕಾಲ ಮೈಸೂರಲ್ಲಿ ಆಸ್ಥಾನ ವಿದ್ವಾಂಸರಾಗಿ ಸೇವೆ ಸಲ್ಲಿಸಿ, 1977 ರಿಂದ ಮಂಗಳೂರು ಆಕಾಶವಾಣಿ ಕೇಂದ್ರದಲ್ಲಿ ನಿಲಯ ಕಲಾವಿದರಾಗಿ ನೇಮಕಗೊಂಡಿದ್ದರು. 1982ರಲ್ಲಿ 'ಎ' ಗ್ರೇಡ್ ಕಲಾವಿದರಾಗಿದ್ದು, 1992ರಲ್ಲಿ ನಿವೃತ್ತರಾಗಿದ್ದರು. ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ತಾಳವಾದ್ಯ ವಿಭಾಗದ ಜೂನಿಯರ್, ಸೀನಿಯರ್ ಹಾಗೂ ವಿದ್ವತ್ ಪರೀಕ್ಷೆಗಳ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಪರೀಕ್ಷಾ ಮಂಡಳಿಯ ಪರಿಷ್ಕೃತ ಪಠ್ಯ ವಸ್ತುವಿನ ರಚನಾ ಮಂಡಳಿ ಸದಸ್ಯರಾಗಿದ್ದರು. 'ಉಪಾಸನೆ' ಚಲನಚಿತ್ರದಲ್ಲಿಯೂ ಪಾತ್ರ ನಿರ್ವಹಿಸಿದ್ದರು. ಮೈಸೂರು ನಾದ ಬ್ರಹ್ಮ ಸಂಗೀತ ಸಭೆ, ಸಂಗೀತ ಕಲಾಭಿವರ್ಧಿನಿ ಸಭೆ, ಮೈಸೂರು ಅರಮನೆ ದರ್ಬಾರ್ ಹಾಲ್, ಬೆಂಗಳೂರು ಗಾಯನ ಸಮಾಜ, ಗಾನ ಕಲಾ ಪರಿಷತ್ತು ಕಾರ್ಯಕ್ರಮಗಳಲ್ಲಿ ಮೃದಂಗ ನುಡಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.