ವಿಧಾನಸಭಾ ಚುನಾವಣೆ: ಅಬಕಾರಿ ಕಂಟ್ರೋಲ್ ರೂಂ
ಮಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಪ್ರಯುಕ್ತ ಚುನಾವಣೆ ನೀತಿ ಸಂಹಿತೆ ಜಾರಿಯಾಗುವವರೆಗೂ ಅಕ್ರಮ ಮದ್ಯ ತಯಾರಿಕೆ, ದಾಸ್ತಾನು, ಸಾಗಾಣಿಕೆ ಹಾಗೂ ಸರಬರಾಜು ಪತ್ತೆ ಹಚ್ಚಲು ಅನುಕೂಲವಾಗುವಂತೆ ಜಿಲ್ಲೆಯ ಅಬಕಾರಿ ಇಲಾಖೆ ದಿನದ 24 ಗಂಟೆ ಕಾರ್ಯ ನಿರ್ವಹಿಸುವ ಕಂಟ್ರೋಲ್ ರೂಂನ್ನು ತೆರೆದಿದೆ.
ತಾಲೂಕು ಮಟ್ಟದಲ್ಲಿ ಅಕ್ರಮ ಮದ್ಯ ದೂರು ಸಲ್ಲಿಸಲು ತಾಲೂಕುವಾರು ಅಧಿಕಾರಿಗಳ ಸಂಚಾರಿ ದೂರವಾಣಿ ಸಂಖ್ಯೆ ಇಂತಿವೆ.
ಮಂಗಳೂರು, ಅಬಕಾರಿ ನಿರೀಕ್ಷಿಕರು, ದಕ್ಷಿಣ ವಲಯ1- 9449615579, ದಕ್ಷಿಣ ವಲಯ2- 9035365162, ಪೂರ್ವ ವಲಯ1- 9480044600, ಪೂರ್ವ ವಲಯ2- 9448823929, ಉತ್ತರ ವಲಯ1- 9902995400, ಉತ್ತರ ವಲಯ2- 9900105493.
ಬಂಟ್ವಾಳ ತಾಲೂಕು ಅಬಕಾರಿ ನಿರೀಕ್ಷಿಕರು- 9448770694, ಬೆಳ್ತಂಗಡಿ ಅಬಕಾರಿ ನಿರೀಕ್ಷಿಕರು- 9448867015, ಪುತ್ತೂರು ನಿರೀಕ್ಷಿಕರು- 9448253092, ಸುಳ್ಯ ಅಬಕಾರಿ ನಿರೀಕ್ಷಿಕರು- 9935410708 ಸಂಚಾರಿ ದೂರವಾಣಿಗಳಿಗೆ ದೂರು ಸಲ್ಲಿಸಬಹುದು ಎಂದು ಪ್ರಕಟಣೆ ತಿಳಿಸಿದೆ.