ವಿಧಾನಸಭಾ ಚುನಾವಣೆಗೆ ಸಿಪಿಎಂ ಸ್ಪರ್ಧೆ
ಮಂಗಳೂರು: ಮೇ 5 ರಂದು ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಮಂಗಳೂರು ದಕ್ಷಿಣ, ಮಂಗಳೂರು, ಬೆಳ್ತಂಗಡಿ ವಿಧಾನಸಭಾ ಕ್ಷೇತ್ರಗಳಲ್ಲಿ ಸಿಪಿಐಎಂ ಪಕ್ಷ ಸ್ಪರ್ಧಿಸಲಿದೆ.
ಮಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿಯಾಗಿ ಸಿಪಿಐಎಂ ರಾಜ್ಯ ಸಮಿತಿ ಸದಸ್ಯ ವಸಂತ ಆಚಾರಿ, ಮಂಗಳೂರು ಅಭ್ಯರ್ಥಿಯಾಗಿ ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಕೃಷ್ಣಪ್ಪ ಸಾಲಿಯಾನ್, ಬೆಳ್ತಂಗಡಿಯ ಕ್ಷೇತ್ರದ ಅಭ್ಯರ್ಥಿಯಾಗಿ ಸಿಪಿಐಎಂ ಬಿ.ಎಂ. ಭಟ್ ಆಯ್ಕೆಯಾಗಿದ್ದಾರೆ ಎಂದು ಸಿಪಿಐಎಂ ಜಿಲ್ಲಾ ಸಮಿತಿ ಕಾರ್ಯದರ್ಶಿ ಬಿ. ಮಾಧವ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
5ವರ್ಷ ಆಡಳಿತದಲ್ಲಿ ಸರ್ಕಾರ ಕೇವಲ ಭ್ರಷ್ಟಚಾರಗಳಿಂದ ಕೂಡಿದ್ದು, ದುಡಿಯುವ ಜನರ ಪರವಾಗಿ ಧ್ವನಿ ಎತ್ತುವವರು ಇರಲಿಲ್ಲ ಎಂದು ತಿಳಿಸಿದರು.
ಆದ್ದರಿಂದ ಜನ ಪರವಾಗಿ ಕಾರ್ಯನಿರ್ವಹಿಸಲು ಸ್ಪರ್ಧೆಗಳಿಯುತ್ತಿದ್ದು, ಜನ ಬೆಂಬಲ ಅಗತ್ಯವಿದೆ. ರಾಜ್ಯದಲ್ಲಿ ಒಟ್ಟು 18 ಕ್ಷೇತ್ರಗಳಿಂದ ಅಭ್ಯರ್ಥಿಗಳನ್ನು ಚುನಾವಣೆ ಕಣಕ್ಕೆ ಇಳಿಸಲಾಗಿದೆ ಎಂದರು.