ಅಚಲ ಪ್ರಕಾಶನ ಉದ್ಘಾಟನೆ, ಅನುಭಾವ ಕೃತಿ ಬಿಡುಗಡೆ
ಸುಳ್ಯ: ಚಂದ್ರಶೇಖರ ಬಿಳಿನೆಲೆ ಹಾಗೂ ಅನುರಾಧಾ ಕುರುಂಜಿಯವರು ಸ್ಥಾಪಿಸಿದ ಅಚಲ ಪ್ರಕಾಶನದ ಉದ್ಘಾಟನೆ ಹಾಗೂ ಚಂದ್ರಶೇಖರ ಬಿಳಿನೆಲೆಯವರ ಕೃತಿ 'ಅನುಭಾವ'ದ ಬಿಡುಗಡೆ ಕಾರ್ಯಕ್ರಮವು ಸುಳ್ಯದ ಟಿ.ಎ.ಪಿ.ಸಿ.ಎಂ.ಎಸ್. ಸಭಾಭವನದಲ್ಲಿ ಇತ್ತೀಚೆಗೆ ನಡೆಯಿತು. ಎನ್.ಎಂ.ಸಿ.ಯ ನಿವೃತ್ತ ಪ್ರಾಂಶುಪಾಲ ಡಾ.ಎಚ್.ಎಂ. ಕುಮಾರಸ್ವಾಮಿ ಪ್ರಕಾಶನವನ್ನು ಉದ್ಘಾಟಿಸಿದರು. ಚಂದ್ರಶೇಖರ ಬಿಳಿನೆಲೆಯವರ 'ಅನುಭಾವ' ಕೃತಿಯನ್ನು ಹಂಪಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಮಾಧವ ಪೆರಾಜೆ ಬಿಡುಗಡೆಗೊಳಿಸಿದರು. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಮೀನಾಕ್ಷಿ ಗೌಡ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೆ.ವಿ.ಜಿ. ಪಾಲಿಟೆಕ್ನಿಕ್ ಪ್ರಾಂಶುಪಾಲ ಎನ್.ಆರ್. ಗಣೇಶ್, ಅಮರ ಸುಳ್ಯ ಸುದ್ದಿ ಪತ್ರಿಕೆಯ ಸಂಪಾದಕ ಜಯಪ್ರಕಾಶ್ ಕುಕ್ಕೇಟಿ ಮತ್ತು ಕುರುಂಜಿ ಪದ್ಮಯ್ಯ ಗೌಡ ಉಪಸ್ಥಿತರಿದ್ದು, ಶುಭ ಹಾರೈಸಿದರು. ಚಂದ್ರಶೇಖರ ಬಿಳಿನೆಲೆ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಅನುರಾಧಾ ಕುರುಂಜಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.