ಆರ್‌ಟಿಒ ತಪಾಸಣೆ ಅವಾಂತರ:ಟ್ರೇಲರ್ ಚಾಲಕ ವಿರುದ್ಧ ಕೇಸ್!
ಮಂಗಳೂರು: ಕದ್ರಿ ಕೆಪಿಟಿ ಬಳಿ ಟ್ರೇಲರ್‌ಗೆ ಡಿಕ್ಕಿ ಹೊಡೆದು ಬೈಕ್ ಸವಾರ ಮೃತಪಟ್ಟ ಪ್ರಕರಣದಲ್ಲಿ ಸಂಚಾರಿ ಪೊಲೀಸರು ಟ್ರೇಲರ್ ವಾಹನ ಚಾಲಕ ವಿರುದ್ಧ ನಿರ್ಲಕ್ಷ್ಯ ಚಾಲನೆ ಪ್ರಕರಣ ದಾಖಲಿಸಿದ್ದಾರೆ!
ಶನಿವಾರ ಬೆಳಗ್ಗೆ ಆರ್‌ಟಿಒ ಪೊಲೀಸ್ ಇನ್‌ಸ್ಪೆಕ್ಟರ್‌ಗಳು ಕಬ್ಬಿಣ ಸರಳು ಸಾಗಿಸುತ್ತಿದ್ದ ಟ್ರೇಲರ್ ವಾಹನವನ್ನು ರಸ್ತೆಯಲ್ಲಿ ನಿಲ್ಲಿಸಿ ತಪಾಸಣೆ ನಡೆಸುತ್ತಿರುವಾಗ ಬೈಕ್ ಸವಾರರು ಹಿಂಬದಿಯಿಂದ ಬಂದ್ ಟ್ರೇಲರ್ ವಾಹಕ್ಕೆ ಡಿಕ್ಕಿ ಹೊಡೆದಿದ್ದರು.
ಈ ಪ್ರಕರಣದಲ್ಲಿ ಟ್ರೇಲರ್ ಚಾಲಕನ ಯಾವುದೇ ತಪ್ಪು ಇಲ್ಲ. ಆದರೆ ಅದೂ ಅಲ್ಲದೆ ಆರ್‌ಟಿಒ ಪೊಲೀಸರ ಪ್ರಕಾರ ನಿಂತ ವಾಹನಕ್ಕೆ ಬೈಕ್ ಡಿಕ್ಕಿ ಹೊಡೆದಿತ್ತು. ಹಾಗಾದರೆ ಟ್ರೇಲರ್ ಚಾಲಕನ ಮೇಲೆ ಪ್ರಕರಣ ದಾಖಲಿಸಬಹುದೇ?
ಪೊಲೀಸರ ನಿಯಮದಂತೆ ಅಪಘಾತವಾದಾಗ ದೊಡ್ಡ ವಾಹನ ವಿರುದ್ಧ ಪ್ರಕರಣ ದಾಖಲಿಸುತ್ತಾರೆ. ಪೊಲೀಸರು, ವಿಐಪಿ ವಾಹನಗಳನ್ನು ಹೊರತು ಪಡಿಸಿ. ಆದರೆ ಇಲ್ಲಿ ವಾಹನ ನಿಲ್ಲಿಸಿದ್ದು ಆರ್‌ಟಿಒ ಅಧಿಕಾರಿಗಳು, ಡಿಕ್ಕಿ ಹೊಡೆದದ್ದು ಬೈಕ್ ಸವಾರರು. ಒಂದು ವೇಳೆ ಅಜಾಕರೂಕತೆಯಿಂದ ನಿಲ್ಲಿಸಿದ್ದೇ ಆದಲ್ಲಿ ಇದಕ್ಕೆ ಕಾರಣ ಆರ್‌ಟಿಒ ಇನ್‌ಸ್ಪೆಕ್ಟರ್‌ಗಳು. ಆದರೆ ಕೇಸ್ ಮಾತ್ರ ಟ್ರೇಲರ್ ಚಾಲಕನ ಮೇಲೆ ! ಇದಕ್ಕೆ ಹೇಳುತ್ತಾರೋ ಏನೋ ಕಾನೂನಿಗೆ ಕಣ್ಣಿಲ್ಲ ಎಂದು!!