ಇಂದಿನಿಂದ ನಾಡಕಚೇರಿಯಲ್ಲಿ ಭೂ ಪರಿವರ್ತನೆ ಕಡತ
ಮಂಗಳೂರು: ಮಂಗಳೂರು ಹಾಗೂ ಬಂಟ್ವಾಳ ತಾಲೂಕುಗಳ ಭೂಸುಧಾರಣಾ ಜಮೀನುಗಳ ಭೂಪರಿವರ್ತನಾ ಅರ್ಜಿಗಳನ್ನು 25ರಿಂದ ಆನ್ಲೈನ್ ಮೂಲಕ ಗ್ರಾ.ಪಂ.ಗಳಿಂದ ನಾಡಕಚೇರಿಗಳಿಗೆ ರವಾನೆಯಾಗಲಿದೆ. ಕೋಟೆಕಾರ್, ಹಳೆಯಂಗಡಿ, ಕಂದಾವರ, ಕಿನ್ನಿಗೋಳಿ, ಬಜ್ಪೆ, ಕಾವಳಪಡೂರು, ಮಾಣಿ, ಕುರ್ನಾಡು, ವಿಟ್ಲ, ಕುಕ್ಕಿಪಾಡಿ ಸ್ವೀಕರಿಸಲಾಗುತ್ತಿದ್ದ ಅರ್ಜಿಗಳನ್ನು ಇನ್ನು ಮಂಗಳೂರು ಎ ಹೋಬಳಿ(ಮಂಗಳೂರು ತಾಲೂಕು ಕಚೇರಿ), ಮಂಗಳೂರು ಬಿ ಹೋಬಳಿ(ತೊಕ್ಕೊಟ್ಟು), ಮುಲ್ಕಿ, ಸುರತ್ಕಲ್, ಮೂಡುಬಿದಿರೆ, ಗುರುಪುರ ಹೋಬಳಿ, ಬಂಟ್ವಾಳ, ಪಾಣೆಮಗಳೂರು, ಹಾಗೂ ವಿಟ್ಲ ನಾಡಕಚೇರಿಗಳಲ್ಲಿ ಸ್ವೀಕರಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ನಾಳೆ ಸಿಪಿಐ ರಾಜಕೀಯ ಸಮಾವೇಶ
ಬಂಟ್ವಾಳ: ದೇಶದ ಆರ್ಥಿಕ, ರಾಜಕೀಯ ಪರಿಸ್ಥಿತಿ ತೀರಾ ಹದಗೆಟ್ಟಿದ್ದು, ಈ ನಿಟ್ಟಿನಲ್ಲಿ ಪಕ್ಷದ ಮುಂದಿನ ಕಾರ್ಯಕ್ರಮ, ದೇಶದ ಪ್ರಸ್ತುತ ರಾಜಕೀಯ ಪರಿಸ್ಥಿತಿಗಳ ಬಗ್ಗೆ ಜನಸಾಮಾನ್ಯರಿಗೆ ತಿಳುವಳಿಕೆ ನೀಡುವ ಉದ್ದೇಶದಿಂದ ರಾಜ್ಯದಾದ್ಯಂತ ಭಾರತ ಕಮ್ಯೂನಿಸ್ಟ್ ಪಕ್ಷದ ವತಿಯಿಂದ ರಾಜಕೀಯ ಸಮಾವೇಶ ಆಯೋಸಿದ್ದು, 26ರಂದು ಬಿ.ಸಿ.ರೋಡ್ನ ಡಾ. ಶ್ರೀನಿವಾಸ ರಾವ್ ವೇದಿಕೆಯಲ್ಲಿ ನಡೆಯಲಿದೆ. ಸಮಾವೇಶವನ್ನು ಸಿಪಿಐ ರಾಜ್ಯ ಕಾರ್ಯದರ್ಶಿ ಪಿ.ವಿ. ಲೋಕೇಶ್ ಉದ್ಘಾಟಿಸಲಿದ್ದಾರೆ. ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಅಮರಜಿತ್ ಕೌರ್, ಹೊಸತು ಪತ್ರಿಕೆ ಸಂಪಾದಕ ಡಾ. ಸಿದ್ದನಗೌಡ ಪಾಟೀಲ್ ಪಾಲ್ಗೊಳ್ಳಲಿದ್ದಾರೆ. ಸ್ವಾಗತ ಸಮಿತಿ ಅಧ್ಯಕ್ಷ, ಸಿಪಿಐ ದ.ಕ. ಮತ್ತು ಉಡುಪಿ ಜಿಲ್ಲಾ ಕಾರ್ಯದರ್ಶಿ ಪಿ. ಸಂಜೀವ ಅಧ್ಯಕ್ಷತೆ ವಹಿಸಲಿದ್ದಾರೆ. ಪಕ್ಷದ ಬಂಟ್ವಾಳ ತಾಲೂಕಿನ ಪುರಸಭಾ ಮಾಜಿ ಅಧ್ಯಕ್ಷ ಬಿ. ವಿಶ್ವನಾಥ ನಾಯ್ಕ ಅವರನ್ನು ಸನ್ಮಾನಿಸಲಾಗುತ್ತದೆ ಎಂದು ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಬಿ. ಶೇಖರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.