ಏ.16ರಿಂದ ಚಿಕ್ಕಮಗಳೂರಿನಲ್ಲಿ ಸೇನಾ ನೇಮಕಾತಿ ಭರ್ತಿ ರ್ಯಾಲಿ
ಮಂಗಳೂರು: ಭೂಸೇನೆ ನೇಮಕಾತಿ ರ್ಯಾಲಿ ಏ.16ರಿಂದ 23ರ ವರೆಗೆ ಚಿಕ್ಕಮಗಳೂರಿನ ಶತಮಾನೋತ್ಸವ ಸ್ಟೇಡಿಯಂನಲ್ಲಿ ನಡೆಯಲಿದೆ. ಬೆಂಗಳೂರು ಭೂಸೇನಾ ವಲಯ ನೇಮಕಾತಿ ಕೇಂದ್ರ ಹಾಗೂ ಮಂಗಳೂರಿನ ಭೂಸೇನಾ ನೇಮಕಾತಿ ಕಚೇರಿ ಈ ರ್ಯಾಲಿ ಹಮ್ಮಿಕೊಂಡಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಹಾಸನ, ಕೊಡಗು, ಉಡುಪಿ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಬಿಜಾಪುರ ಹಾಗೂ ಧಾರವಾಡ ಜಿಲ್ಲೆಗಳ ಅಭ್ಯರ್ಥಿಗಳು ರ್ಯಾಲಿಯಲ್ಲಿ ಪಾಲ್ಗೊಳ್ಳಬಹುದು. ಸಿಪಾಯಿ ಟೆಕ್ನಿಕಲ್, ಸಿಪಾಯಿ ನರ್ಸಿಂಗ್ ಸಹಾಯಕ, ಸಿಪಾಯಿ ಕ್ಲರ್ಕ್, ಗೋದಾಮು ನಿರ್ವಾಹಕ ಹುದ್ದೆ ಭರ್ತಿಗೆ ರ್ಯಾಲಿ ನಡೆಯಲಿದೆ. ರ್ಯಾಲಿಯಲ್ಲಿ ಭಾಗವಹಿಸುವವರು 0824-2458376ನ್ನು ಸಂಪರ್ಕಿಸಬಹುದು.