ಐಟಿ ಪಾವತಿಗೆ ವಿಶೇಷ ಕೌಂಟರ್
ಮಂಗಳೂರು: ಮಂಗಳೂರಿನ ಅತ್ತಾವರ ಎಂ.ಜಿ. ರಸ್ತೆಯಲ್ಲಿರುವ ಆದಾಯ ತೆರಿಗೆ ಇಲಾಖೆಯ ಸ್ವೀಕರಣಾ ಕೇಂದ್ರದಲ್ಲಿ 30 ಮತ್ತು 31ರಂದು ವಿಶೇಷ ಕೌಂಟರ್ಗಳು ಕಾರ್ಯಾಚರಿಸಲಿದೆ. ಆರ್ಥಿಕ ವರ್ಷಾಂತ್ಯದ ಈ ದಿನದಂದು ಆದಾಯ ತೆರಿಗೆ ಪಾವತಿಸುವವರಿಗೆ ಅನುಕೂಲವಾಗಲು ತೆರಿಗೆ ಪಾವತಿಗೆ 6 ವಿಶೇಷ ಕೌಂಟರ್ಗಳನ್ನು ತೆರೆಯಲಾಗುವುದು ಎಂದು ಇಲಾಖೆಯ ಸಹಾಯಕ ಆಯುಕ್ತ ನಝೀರ್ ಅಹ್ಮದ್ ತಿಳಿಸಿದ್ದಾರೆ.
ಬಾರ್ಯ ಗ್ರಾ.ಪಂ. ಕಾರ್ಯದರ್ಶಿಗೆ ದಂಡ
ಬೆಳ್ತಂಗಡಿ: ನಿಗದಿತ ಅವಧಿಯೊಳಗೆ ಮಾಹಿತಿ ಹಕ್ಕು ಅರ್ಜಿದಾರರಿಗೆ ಮಾಹಿತಿ ನೀಡದ ಕಾರಣ ಬಾರ್ಯ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಹೂವಪ್ಪ ಗೌಡ ಹಾಗೂ ಗಣೇಶ್ ಪುತ್ತಿಲ ಅವರಿಗೆ ಮಾಹಿತಿ ಹಕ್ಕು ಆಯೋಗವು ರು. 5000 ದಂಡ ವಿಧಿಸಿದೆ. ಬಾರ್ಯ ಗ್ರಾಮದ ನಿವಾಸಿಯೊಬ್ಬರು ಮಾಹಿತಿ ಹಕ್ಕು ಅಧಿನಿಯಮ 2005 ರ ಅಡಿ ಮಾಹಿತಿ ಕೋರಿ ಅರ್ಜಿ ಸಲ್ಲಿಸಿದ್ದರು.