ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಬೋಟ್‌ನಿಂದ ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Lingaraj Badiger
Updated On : 25 Mar 2013, 10:40 am

ಮಲ್ಪೆ: ಮಲ್ಪೆ ಬಂದರಿನಲ್ಲಿ ಬೋಟ್‌ನಿಂದ ಆಕಸ್ಮಿಕವಾಗಿ ಜಾರಿ ಸಮುದ್ರಕ್ಕೆ ಬಿದ್ದು ಮೀನುಗಾರರೊಬ್ಬರು ಮೃತಪಟ್ಟ ಘಟನೆ ಶನಿವಾರ ಸಂಜೆ ನಡೆದಿದೆ. ಮೃತರು ನಾಗರಾಜ ನಾಯ್ಕ (21).
   ಈತ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಸಮೀಪದ ಗಂಜಿಕೇರಿ ಎಂಬಲ್ಲಿನ ನಿವಾಸಿ ಅಣ್ಣಪ್ಪ ನಾಯ್ಕ್ ಎಂಬವರ ಮಗ. ಶನಿವಾರ ಸಂಜೆ 5 ಗಂಟೆಗೆ ಮಲ್ಪೆ ಬಂದರಿನಲ್ಲಿ ತಮ್ಮ ಬೋಟ್‌ನಿಂದ ಮೀನು ಖಾಲಿ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ಸಮುದ್ರಕ್ಕೆ ಬಿದ್ದು, ನೀರಿನಲ್ಲಿ ಮುಳುಗಿ ಮೃತಪಟ್ಟಿರುತ್ತಾರೆ. ಈ ಬಗ್ಗೆ ಸುಬ್ಬಯ್ಯ ಎಂಬವರು ನೀಡಿದ ದೂರಿನಂತೆ ಮಲ್ಪೆ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿದೆ.   
ಬಟ್ಟೆ ಅಂಗಡಿಯಿಂದ 300 ಜೀನ್ಸ್ ಪ್ಯಾಂಟ್ ಕಳವು
ಮಂಗಳಳೂರು: ಮಂಗಳೂರಲ್ಲಿ ಚಿನ್ನಾಭರಣ ಕಳ್ಳರು ಹೆಚ್ಚುತ್ತಿರುವಂತೆಯೇ ಕೆಲವು ಕಳ್ಳರು ಬಟ್ಟೆ ಅಂಗಡಿಗಳಿಗೆ ನುಗ್ಗತೊಡಗಿದ್ದಾರೆ. ರಾವ್ ಆ್ಯಂಡ್ ರಾವ್ ವೃತ್ತದ  ಆರ್ಯನ್ ಟ್ರಾವೆಲ್ಸ್ ಕೆಳ ಅಂತಸ್ತಿನ ಪ್ಯಾಷನ್ ಟಚ್ ಬಟ್ಟೆ ಅಂಗಡಿಗೆ ನುಗ್ಗಿದ ಕಳ್ಳರು  300 ಜೀನ್ಸ್ ಇತರ ಬಟ್ಟೆ ಬರೆ ಕಳವು ಮಾಡಿದ್ದಾರೆ. ಭಾನುವಾರ ಬೆಳಗ್ಗೆ ಗೋಡೌನ್‌ಗೆ ತೆರಳಿದಾಗ ಬಟ್ಟೆ ಬರೆ ಕಳವಾಗಿರುವುದು ಬೆಳಕಿಗೆ ಬಂದಿದೆ. ಮಾಲೀಕ ಮಹಮ್ಮದ್ ಇಸ್ಮಾಯಿಲ್ ಬಂದರು ಪೊಲೀಸರಿಗೆ ದೂರು ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement