ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಕಾರ್ಮಿಕ ನಾಯಕರಿಗೆ ಅವಕಾಶ ನೀಡಿ: ಸುದತ್ ಜೈನ್

Lingaraj Badiger
Updated On : 26 Mar 2013, 10:50 am

ಮಂಗಳೂರು: ರಾಜಕೀಯ ಪಕ್ಷಗಳಲ್ಲಿ ಕಾರ್ಮಿಕರನ್ನು ಕಾರ್ಮಿಕ ನಾಯಕರ ಹೋರಾಟ ಬಳಸಿಕೊಂಡು ಬೇಳೆ ಬೇಯಿಸಿಕೊಂಡ ಬಳಿಕ ಮೂಲೆಗೆ ತಳ್ಳಲಾಗುತ್ತಿದೆ. ಆದ್ದರಿಂದ ರಾಜಕೀಯ ಪಕ್ಷಗಳು ಕಾರ್ಮಿಕ ಮುಖಂಡರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬೇಕು ಎಂದು ಅಖಿಲ ಭಾರತ ಕಾರ್ಮಿಕ ಸಂಘ ಅಧ್ಯಕ್ಷ ಸುದತ್ ಜೈನ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 'ಚಡ್ಡಿ ಹಾಕಿಸಲೂ ಗೊತ್ತು, ಚಡ್ಡಿ ಜಾರಿಸಲೂ ಗೊತ್ತು' ಎಂದು ಕೇವಲವಾಗಿ ಹೇಳಿಕೆ ನೀಡುವ, ಸರಿಯಾದ ಶಿಕ್ಷಣ ಇಲ್ಲದ ಸಂಸದ ನಳಿನ್‌ಕುಮಾರ್ ಕಟೀಲ್ ಅಂಥವರನ್ನು ಆಯ್ಕೆ ಮಾಡಬೇಡಿ. ಹಾಗೆ ನೋಡಿದರೆ ಎಡಪಕ್ಷಗಳೇ ವಾಸಿ. ರಾಷ್ಟ್ರೀಯ ಚಿಂತನೆ ಇಲ್ಲದಿದ್ದರೂ ಕಮ್ಯುನಿಷ್ಟ್ ಪಕ್ಷಗಳು ಕಾರ್ಮಿಕರ ನಾಯಕರನ್ನು ಚುನಾವಣೆಯಲ್ಲಿ ಸ್ಪರ್ಧೆಗೆ ಇಳಿಸಿವೆ' ಎಂದರು. ಭ್ರಷ್ಟಾಚಾರ ವಿರುದ್ಧ ಅಣ್ಣಾ ಹಜಾರೆ ಸತ್ಯಾಗ್ರಹಕ್ಕೆ ಕರೆ ನೀಡಿದಾಗ ರಾಜಕೀಯ ಪಕ್ಷಗಳ ಯಾವುದೇ ನಾಯಕರು ಪ್ರತಿಭಟನೆಯತ್ತ ಮುಖ ಮಾಡಿಲ್ಲ. ಈ ಹಿಂದೆ ಕಾರ್ಮಿಕ ಸಂಘ ಇಎಸ್‌ಐ ಆಸ್ಪತ್ರೆ ಸುಧಾರಣೆಗೆ ಉಪವಾಸ ಸತ್ಯಾಗ್ರಹ ಮಾಡಿದಾಗ ಸ್ಪಂದಿಸಿಲ್ಲ.
ಮುಂದೂಡಿಕೆ: ರಾಜಕೀಯ ಪಕ್ಷಗಳಿಂದ ಕಾರ್ಮಿಕರ ನಿರ್ಲಕ್ಷ್ಯ ಖಂಡಿಸಿ ಮೇ 1ರಿಂದ ಆಯೋಜಿಸಿದ್ದ ಉಪವಾಸ ಸತ್ಯಾಗ್ರಹವನ್ನು ಚುನಾವಣೆ ಹಿನ್ನೆಲೆಯಲ್ಲಿ ಮೇ 9 ಕ್ಕೆ ಮುಂದೂಡಲಾಗಿದೆ ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement