ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ನೀರು ಕಲುಷಿತ; ಗ್ರಾಮಸ್ಥರ ಪ್ರತಿಭಟನೆ

Lingaraj Badiger
Updated On : 26 Mar 2013, 10:53 am

ಮೂಲ್ಕಿ: ನಗರ ಪಂಚಾಯಿತಿ ವ್ಯಾಪ್ತಿಯ ಕಾರ್ನಾಡು ಗ್ರಾಮದ ಮರ್ಕುಂಜದಲ್ಲಿ ಕಳೆದ ಕೆಲವು ದಿನಗಳಿಂದ ನ.ಪಂ. ಪೂರೈಸುವ ಕುಡಿಯುವ ನೀರಿನ ಪೈಪ್‌ನಲ್ಲಿ ಉಪ್ಪು ಮಿಶ್ರಿತ ಕೆಂಪು ನೀರು ಬರುತ್ತಿದೆ. ಈ ಬಗ್ಗೆ ಸ್ಥಳೀಯ ಸದಸ್ಯ ಹಾಗೂ ನಗರ ಪಂಚಾಯಿತಿ ಸಿಬ್ಬಂದಿಗೆ ಹಲವು ಬಾರಿ ತಿಳಿಸಿದರೂ ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಇತ್ತೀಚೆಗೆ ನ.ಪಂ. ಕಚೇರಿಯಲ್ಲಿ ಪ್ರತಿಭಟನೆ ನಡೆಸಿ ಪಂಚಾಯಿತಿ ಅಧ್ಯಕ್ಷಗೆ ನೀರಿನ ಅವ್ಯವಸ್ಥೆ ಸರಿಪಡಿಸುವಂತೆ ಒತ್ತಾಯಿಸಿದರು.  
ಮರ್ಕುಂಜ ಪರಿಸರದಲ್ಲಿ ನಗರ ಪಂಚಾಯಿತಿಯ ಬೋರ್‌ವೆಲ್‌ನಿಂದ ಕುಡಿಯುವ ನೀರಿನ ಸರಬರಾಜು ನಡೆಯುತ್ತಿದ್ದು ನೀರಿನ ಅಂತರ್ಜಲ ಮಟ್ಟ ಕೆಳಕ್ಕಿಳಿದಿರುವುದರಿಂದ ಉಪ್ಪು ನೀರು ಬರುತ್ತಿದೆ. ಜೊತೆಗೆ ಬೋರ್‌ವೆಲ್‌ನ ಕಬ್ಬಿಣದ ಪೈಪು ತುಕ್ಕು ಹಿಡಿದಿರುವುದರಿಂದ ಕೆಂಪು ಬಣ್ಣದ ನೀರು ಬರುತ್ತಿದ್ದು ಇದರಿಂದ ಸ್ಥಳೀಯರಿಗೆ ನೀರಿನ ಸಮಸ್ಯೆಯಾಗಿದೆ. ಬೋರ್‌ವೆಲ್ ದುರಸ್ತಿ ಪಡಿಸುವುದರ ಜೊತೆಗೆ ಬಾವಿ ನಿರ್ಮಾಣದ ಬಗ್ಗೆ ಒತ್ತು ನೀಡುವುದಾಗಿ, ಅಲ್ಲಿಯವರೆಗೆ ಪರ್ಯಾಯ ವ್ಯವಸ್ಥೆ ಮಾಡುವುದಾಗಿ ಪಂಚಾಯಿತಿ ಅಧ್ಯಕ್ಷ ಶಶಿಕಾಂತ್ ಶೆಟ್ಟಿ ಭರವಸೆ ನೀಡಿದರು.
--
ಸಿಪಿಐ ಸಭೆ ಮುಂದಕ್ಕೆ
ಬಂಟ್ವಾಳ: ಚುನಾವಣಾ  ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ 26ರಂದು ಬಿ.ಸಿ.ರೋಡ್‌ನಲ್ಲಿ ನಡೆಯಬೇಕಾಗಿದ್ದ ಸಿಪಿಐ ಸಮಾವೇಶ ಮುಂದೂಡಲಾಗಿದೆ. ಪಕ್ಷದ ಜಿಲ್ಲಾ ಮಂಡಳಿ ಸದಸ್ಯೆ  ವೀರಮ್ಮ ಅಧ್ಯಕ್ಷತೆಯ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದ್ದು, ಸಮಾವೇಶ ಮೇ 14ರಂದು ನಡೆಸಲು ನಿರ್ಣಯಿಸಲಾಗಿದೆ ಎಂದು ಜಿಲ್ಲಾ ಕಾರ್ಯದರ್ಶಿ ಪಿ. ಸಂಜೀವ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement