ಕಾಂಗ್ರೆಸ್ ಮುಖಂಡರ ನೀರು ಹಂಚಿಕೆಗೆ ನೀತಿ ಸಂಹಿತೆ ಅಡ್ಡಿ
ಉಡುಪಿ: ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯ ಹಿನ್ನೆಲೆಯಲ್ಲಿ ಇಲ್ಲಿನ ಶಾಸ್ತಾವು ಎಂಬಲ್ಲಿ ಕುಡಿಯುವ ನೀರು ಪೂರೈಕೆ ಮಾಡುತ್ತಿದ್ದ ಕಾಂಗ್ರೆಸ್ ನಾಯಕ ಪ್ರಮೋದ್ ಮಧ್ವರಾಜ್ಗೆ ಸೇರಿದ ಟ್ಯಾಂಕರುಗಳನ್ನು ಮಂಗಳವಾರ ಚುನಾವಣಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಬ್ರಹ್ಮಾವರದ ಶಾಸ್ತಾವು ಎಂಬಲ್ಲಿ ಮಂಗಳವಾರ ಬೆಳಗ್ಗೆ ಪ್ರಮೋದ್ ಮಧ್ವರಾಜ್ ಅವರು ಕಳೆದ ಹಲವು ವಾರಗಳಿಂದ ಟ್ಯಾಂಕರುಗಳಿಂದ ಮನೆ ಮನೆಗೆ ನೀರು ಪೂರೈಸುತ್ತಿದ್ದರು. ಆದರೆ ಮಂಗಳವಾರ ದೂರು ಬಂದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಚುನಾವಣಾಧಿಕಾರಿಗಳು ಟ್ಯಾಂಕರ್ ವಶಕ್ಕೆ ತೆಗೆದುಕೊಂಡಿದ್ದಾರೆ. ಪ್ರಮೋದ್ ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುವ ಕಾಂಗ್ರೆಸ್ನ ಸಂಭಾವ್ಯ ಅಭ್ಯರ್ಥಿಯಾಗಿರುವುದರಿಂದ ನೀರು ಪೂರೈಕೆ ಕೂಡ ಮತ ಸೆಳೆಯಲು ಮತದಾರರಿಗೆ ಒಡ್ಡುವ ಆಮಿಷವಾಗುತ್ತದೆ ಎನ್ನುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಈ ಕ್ರಮ ಕೈಗೊಂಡಿದ್ದಾರೆ.