ಜೆಡಿಎಸ್ಗೆ 117 ಸೀಟು, ಎಚ್ಡಿಕೆ ಮುಖ್ಯಮಂತ್ರಿ!
ಮಂಗಳೂರು: ರಾಜ್ಯ ವಿಧಾನಸಭೆಯಲ್ಲಿ ಜೆಡಿಎಸ್ಗೆ 117 ಸೀಟು, ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ! ಇದನ್ನು ಹೇಳಿದ್ದು ಸೇವಾದಲ ಅಧ್ಯಕ್ಷ ಅಕ್ಬರ್ ಉಳ್ಳಾಲ್!
ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಠಿ ಕರೆದು ವಾದ ಮಂಡಿಸಿದ ಅಕ್ಬರ್, ಈ ಭವಿಷ್ಯ ಖಂಡಿತಾ ನಿಜವಾಗುತ್ತದೆ ಏಕೆಂದರೆ ಅವರು ಈ ಹಿಂದೆ ಹೇಳಿದ್ದ ಬಿಜೆಪಿ ಆಡಳಿತ ಕುರಿತ ಭವಿಷ್ಯ ನಿಜವಾಗಿದೆ ಎಂದು ಹೇಳಿದರು. 2011ರಲ್ಲಿ ಅವರು ಸ್ಥಳೀಯ ಮಾಸ ಪತ್ರಿಕೆಯಲ್ಲಿ ಬರೆದ ಭವಿಷ್ಯ ಹೀಗಿತ್ತು. 'ಏಪ್ರಿಲ್ 30ರ ನಂತರ ಬಿಜೆಪಿ ಸರ್ಕಾರ ಸುಭದ್ರ'. ಅದು ನಿಜವಾಗಿದೆ ಆದ್ದರಿಂದ ಈ ಬಾರಿ ಹೇಳುವ ಭವಿಷ್ಯ ನಿಜವಾಗುತ್ತದೆ ಎನ್ನುವುದು ಅವರ ವಾದ. ಇವರ ಲೆಕ್ಕದಲ್ಲಿ ಕಾಂಗ್ರೆಸ್ಗೆ 2 ಸ್ಥಾನವಂತೆ, ಬಿಜೆಪಿ ತೃತೀಯ ಶಕ್ತಿಯಂತೆ!
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜೆಡಿಎಸ್ ಎಷ್ಟು ಸ್ಥಾನ ಪಡೆಯುತ್ತದೆ ಎಂದು ಕೇಳಿದರೆ 'ಅದು ಹೇಳಲು ಸಾಧ್ಯವಿಲ್ಲ' ಎಂದರು. ಜಿಲ್ಲಾ ಜೆಡಿಎಸ್ಗೆ ವಲಸೆ ಬಂದವರು ಅಧಿಕಾರ ಅನುಭವಿಸಿ ಹೋದರು. ಕಾರ್ಯಕರ್ತರು ಇನ್ನೂ ಇದ್ದಾರೆ. ಅವರೇ ಪಕ್ಷವನ್ನು ಗೆಲ್ಲಿಸುತ್ತಾರೆ ಎಂದು ಭರವಸೆ ವ್ಯಕ್ತಪಡಿಸಿದರು. 117 ಸೀಟುಗಳು ಎಂದು ಹೇಗೆ ಕರಾರುವಾಕ್ ಹೇಳುತ್ತೀರಿ ಎಂದು ಪತ್ರಕರ್ತರು ಪ್ರಶ್ನಿಸಿದರೆ, 'ಇನ್ನು ಪ್ರಶ್ನೆ ಕೇಳುವುದಿದ್ದರೆ ಮೇ 8ರಂದು ಮತ ಎಣಿಕೆ ದಿನ ಕೇಳಿ. ಈ ಬಗ್ಗೆ ನಾವು ಬೆಟ್ ಕಟ್ಟುವುದಿಲ್ಲ, ಏಕೆಂದರೆ ನಮ್ಮ ಧರ್ಮ ಪ್ರಕಾರ ಬೆಟ್ ಕಟ್ಟುವುದು ಹರಾಮ್' ಎಂದರು.