ದ.ಕ ಜಿಲ್ಲಾಧಿಕಾರಿ ಪ್ರಕಾಶ್ ದಿಢೀರ್ ವರ್ಗ, ಹರ್ಷಗುಪ್ತಾ ನೇಮಕ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಪ್ರಕಾಶ್‌ರನ್ನು ದಿಢೀರನೆ ವರ್ಗಾಯಿಸಲಾಗಿದ್ದು, ಅವರ ಸ್ಥಾನಕ್ಕೆ ಬೆಂಗಳೂರಿನಿಂದ ಹರ್ಷಗುಪ್ತಾರನ್ನು ವರ್ಗಾಯಿಸಲಾಗಿದೆ. ಪ್ರಕಾಶ್ ಜಿಲ್ಲಾಧಿಕಾರಿಯಾಗಿ 2012 ಡಿ.8ರಂದು ಅಧಿಕಾರ ಸ್ವೀಕರಿಸಿದ್ದರು. ಅದಕ್ಕೂ ಮೊದಲು ಅವರು ಕೆಎಸ್‌ಆರ್‌ಟಿಸಿ ಕೇಂದ್ರ ಕಚೇರಿಯಲ್ಲಿ ಆಡಳಿತಾತ್ಮಕ ವಿಭಾಗದ ನಿರ್ದೇಶಕರಾಗಿದ್ದರು. ಪ್ರಕಾಶ್ ಅಧಿಕಾರ ಸ್ವೀಕರಿಸಿ 4 ತಿಂಗಳಿಗೂ ಮುನ್ನವೇ ಈ ವರ್ಗಾವಣೆಯಾಗಿದೆ. ಅವರನ್ನು ಬೆಂಗಳೂರಿನ ಯಾವ ವಿಭಾಗಕ್ಕೆ ವರ್ಗಾಯಿಸಲಾಗಿದೆ ಎಂಬುದು ಸ್ಪಷ್ಟವಾಗಿಲ್ಲ. ಪುತ್ತೂರಿನಲ್ಲಿ ಸಹಾಯಕ ಕಮೀಷನರ್ ಆಗಿದ್ದ ಹರ್ಷಗುಪ್ತಾ, ಬಾಲವನ ಅಭಿವೃದ್ಧಿ, ತೆರಿಗೆ ವಂಚಕರ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಂಡಿದ್ದರು. ಪ್ರಸ್ತುತ ಕಾರ್ಮಿಕ ಇಲಾಖಾ ಆಯುಕ್ತ ಹುದ್ದೆಯಿಂದ ಹರ್ಷ ಗುಪ್ತಾರನ್ನು ದಕ್ಷಿಣ ಕನ್ನಡಕ್ಕೆ ವರ್ಗಾಯಿಸಲಾಗಿದೆ. ಚುನಾವಣೆ ಹಿನ್ನಲೆಯಲ್ಲಿ ಈ ವರ್ಗಾವಣೆ ನಡೆದಿದ್ದು, ಹರ್ಷಗುಪ್ತಾ ಮಾ.28ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ.